ಭೀಕರವಾಗಿ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್!

ಸೆಪ್ಟೆಂಬರ್ 5, 2025 - 21:12
 0  19
ಭೀಕರವಾಗಿ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್!

ಗೋರಖ್ ಪುರ:- ಭೀಕರವಾಗಿ ಪತ್ನಿ ಕೊಲೆಗೈದು ಎಸ್ಕೇಪ್ ಆಗಿದ್ದ ಪತಿಯನ್ನೂ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಗೋರಖ್​ಪುರದ ಫೋಟೊ ಸ್ಟುಡಿಯೋದ ಬಳಿ ಜರುಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆ ಫೋಟೊಗಾಗಿ ಸ್ಟುಡಿಯೋಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರು ರಕ್ತಸಿಕ್ತ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗುಂಡು ಹಾರಿಸಿದ ನಂತರ ಆರೋಪಿ ವಿಶ್ವಕರ್ಮ ಚೌಹಾಣ್ ಸ್ಥಳದಿಂದ ಪರಾರಿಯಾಗಿದ್ದ ಆದರೆ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ವಿಶ್ವಕರ್ಮ ಮತ್ತು ಅವರ ಪತ್ನಿ ಮಮತಾ ಅಲಿಯಾಸ್ ಮುಕ್ತಿ 30 ವರ್ಷದ ಚೌಹಾಣ್ ಮದುವೆಯಾಗಿ ಹಲವು ವರ್ಷಗಳು ಕಳೆದಿತ್ತು ಕಳೆದ ಹತ್ತು ವರ್ಷಗಳಿಂದ ನಿತ್ಯವೂ ಒಂದಲ್ಲಾ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಆಸ್ತಿ ಸಮಸ್ಯೆಯಿಂದಾಗಿ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಮತಾ ಬ್ಯಾಂಕ್ ರಸ್ತೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು 13 ವರ್ಷದ ಮಗಳಿದ್ದಾಳೆ.

 ವಿಶ್ವಕರ್ಮ ಜೈಲ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಮಮತಾ ಖಜ್ನಿಗೆ ಸೇರಿದವಳು. ಬುಧವಾರ ಸಂಜೆ, ವಿಶ್ವಕರ್ಮ ಜೈಲ್ ರಸ್ತೆಯಲ್ಲಿರುವ ಫೋಟೋ ಸ್ಟುಡಿಯೋಗೆ ಬಂದಾಗ ಮಮತಾ ಅಲ್ಲಿಯೇ ಇದ್ದರು. ಅವರ ನಡುವೆ ವಾಗ್ವಾದ ನಡೆಯಿತು, ನಂತರ ವಿಶ್ವಕರ್ಮ ದೇಶೀಯ ಪಿಸ್ತೂಲನ್ನು ಹೊರತೆಗೆದು ಆಕೆಯ ಎದೆಗೆ ಗುಂಡು ಹಾರಿಸಿದ ಪರಿಣಾಮ ಮಮತಾ ಸಾವನ್ನಪ್ಪಿದ್ದರು. ಇದೀಗ ಆರೋಪಿ ಬಂಧಿಸಿರುವ ಪೋಲೀಸರು ಹೆಚ್ಚಿನ ತನಿಖೆ ಕೈಗೊಂಡಿದದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow