ಮದ್ಯಪ್ರಿಯರ ಗಮನಕ್ಕೆ: ನಾಳೆ ಇಲ್ಲಿ ಎಣ್ಣೆ ಮಾರಾಟ ನಿಷೇಧ!

ಕೊಡಗು:- ಕೊಡವಾಮೆ ಬಾಳೋ ಪಾದಯಾತ್ರೆ ಹಿನ್ನೆಲೆ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದು, ಪಾರ್ಕಿಂಗ್ ನಿರ್ಬಂಧ ವಿಧಿಸಲಾಗಿದೆ.
ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ಬೃಹತ್ ಸಮಾವೇಶ ಕೂಡ ನಡೆಯಲಿದ್ದು, ಹೀಗಾಗಿ ಜಿಲ್ಲೆಯ ಮಡಿಕೇರಿ ನಗರದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ. ಜೊತೆಗೆ ನಗರದಲ್ಲಿ ವಾಹನಗಳ ಪಾರ್ಕಿಂಗ್ಗೆ ನಿರ್ಬಂಧಿಸಲಾಗಿದೆ.
ಸಂಸ್ಕೃತಿ ರಕ್ಷಣೆಗಾಗಿ ಕೊಡವಾಮೆ ಬಾಳೋ ಪಾದಯಾತ್ರೆ ನಡೆಯುತ್ತಿದೆ. ನಾಲ್ಕನೇ ದಿನವೂ ಪಾದಯಾತ್ರೆಯಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರು. ಕುಟ್ಟದಿಂದ ಮಡಿಕೇರಿವರೆಗೆ ಮೆರವಣಿಗೆ ಸಾಗುತ್ತಿದೆ. ಕೊಡವ ಸಂಸ್ಕೃತಿ ಉಳಿಸಲು ಪಾದಯಾತ್ರೆ ನಡೆಯುತ್ತಿದೆ. ನಾಳೆಯ ಬೃಹತ್ ಸಮಾವೇಶದಲ್ಲಿ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






