ಮನೆಯ ಕಿಟಕಿ ಹೀಗಿದ್ದರೆ ಕಂಟಕ ತಪ್ಪಿದ್ದಲ್ಲ! ದುಡಿದ ಹಣವೆಲ್ಲಾ ನೀರಿನಂತೆ ಹರಿದು ಹೋಗುತ್ತೆ

ಜ್ಯೋತಿಷ್ಯದಲ್ಲಿ ವಾಸ್ತು ಶಾಸ್ತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಮುಖ್ಯವಾಗಿ 8 ದಿಕ್ಕುಗಳಿವೆ. ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮವನ್ನು ಹೊರತುಪಡಿಸಿ ಇತರ ದಿಕ್ಕುಗಳನ್ನು ಆಗ್ನೇಯ, ನೈಋತ್ಯ, ವಾಯವ್ಯ ಮತ್ತು ಈಶಾನ್ಯ ಎಂದು ಕರೆಯಲಾಗುತ್ತದೆ. ಅಲ್ಲದೆ, ಈ ಎಲ್ಲಾ ನಿರ್ದೇಶನಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಆದರೆ ಈ ಎಲ್ಲಾ ದಿಕ್ಕುಗಳಲ್ಲಿ ಈಶಾನ್ಯ ಕೋನವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುತ್ತದೆ.
ಇನ್ನೂ ಮನೆಯಲ್ಲಿ ವಾಸಿಸುವವರ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಈ ಬರಹದಲ್ಲಿ ಕಿಟಕಿಗಳು ಯಾವ ದಿಕ್ಕಿನಲ್ಲಿ ಇದ್ದರೆ ಅನುಕೂಲ, ಸರಿಯಾದ ಜಾಗದಲ್ಲಿ ಇಲ್ಲದಿದ್ದರೆ ಏನು ಕಷ್ಟ ಎದುರಾಗಲಿವೆ ಎಂಬುದು ಇಲ್ಲಿದೆ.
ಕಿಟಕಿ ಇಡಲು ಸರಿಯಾದ ದಿಕ್ಕು
ಕಿಟಕಿ ಇಡುವುದಕ್ಕೂ ರೀತಿ, ನೀತಿಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿಟಕಿ ಇಡಲು ಅತ್ಯುತ್ತಮ ದಿಕ್ಕು ಉತ್ತರ, ಈಶಾನ್ಯ ಮತ್ತು ಪೂರ್ವ. ಈ ದಿಕ್ಕುಗಳಲ್ಲಿ ಕಿಟಕಿಯನ್ನು ಇಡುವುದು ಮಂಗಳಕರ ಎಂದು ಭಾವಿಸಲಾಗುತ್ತದೆ. ಮನೆಗೆ ಗಾಳಿ, ಬೆಳಕು ಬರುವುದರ ಜೊತೆ ಸಕಾರಾತ್ಮಕತೆಯೂ ಬರುತ್ತದೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಉತ್ತರ ದಿಕ್ಕಿನಲ್ಲಿ ಕಿಟಕಿ ಇದ್ದರೆ ಮನೆಗೆ ಸಂಪತ್ತು, ಸಮೃದ್ಧಿ ಉಂಟಾಗುತ್ತದೆ ಎಂದು ನಂಬಲಾಗಿದೆ.
ಕಿಟಕಿ ವಾಸ್ತು ದೋಷದಿಂದಾಗುವ 10 ಅನನುಕೂಲಗಳು
1. ತಪ್ಪು ದಿಕ್ಕಿನಲ್ಲಿ ಇಡಲಾಗಿರುವ ಕಿಟಕಿಗಳಿಂದ ಆ ಮನೆಯು ಅದೃಷ್ಟ ಹೊಂದುವುದು ತಪ್ಪುತ್ತದೆ ಎನ್ನಲಾಗುತ್ತದೆ.
2. ದಕ್ಷಿಣ ದಿಕ್ಕನ್ನು ಯಮ ರಾಜನಿಗೆ ಸೇರಿದ ದಿಕ್ಕು ಎನ್ನಲಾಗುತ್ತದೆ. ಹಾಗಾಗಿ ಒಂದು ವೇಳೆ ದಕ್ಷಿಣ ದಿಕ್ಕಿನಲ್ಲಿ ಕಿಟಕಿ ಇಟ್ಟರೆ ಅದರಿಂದ ನೋವು, ತೊಂದರೆ ಸಿಗಬಹುದಾಗಿದೆ.
3. ನೈರುತ್ಯ ಮೂಲೆಯೂ ವಾಸ್ತು ಪ್ರಕಾರ ಕಿಟಕಿ ಇಡುವುದಕ್ಕೆ ಸೂಕ್ತವಲ್ಲ. ನೈರುತ್ಯ ಮೂಲೆಯಲ್ಲಿರುವ ಕಿಟಕಿಯಿಂದ ಸಂಪತ್ತು ನಷ್ಟ ಉಂಟಾಗಬಹುದು.
4. ಆಗ್ನೇಯ ಮೂಲೆಗೂ ನಿಮ್ಮ ಆರೋಗ್ಯಕ್ಕೂ ಸಂಬಂಧ ಇದೆ. ನಿಮ್ಮ ಮನೆಯಲ್ಲಿ ಕಿಟಕಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಆರೋಗ್ಯ ಕೈಕೊಡುವ ಸಾಧ್ಯತೆಗಳು ಇರುತ್ತವೆ.
5. ವಾಯುವ್ಯ ಮೂಲೆಗೂ ಅಕ್ಕಪಕ್ಕದ ಮನೆಗಳಿಗೂ ನಂಟು ಇದೆ. ವಾಯುವ್ಯ ಮೂಲೆಯಲ್ಲಿರುವ ಕಿಟಕಿಯಿಂದಾಗಿ ನೆರೆಹೊರೆಯವರೊಂದಿಗೆ ಜಗಳ ಉಂಟಾಗಬಹುದು.
6. ಪಶ್ಚಿಮ ದಿಕ್ಕಿನ ಕಿಟಕಿಯು ಜೀವನದಲ್ಲಿ ನಕಾರಾತ್ಮಕತೆ ತುಂಬುತ್ತದೆ ಎಂದು ನಂಬಲಾಗಿದೆ. ಈ ಕಿಟಕಿ ಯಾವಾಗಲೂ ನಿರಾಶೆಯಿಂದ ಇರುವಂತೆ ಮಾಡಬಹುದಾಗಿದೆ. ನಿರುತ್ಸಾಹ ಕಾಡುತ್ತದೆ.
7. ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಬೆಸ ಸಂಖ್ಯೆಯ ಕಿಟಕಿಗಳು ಇರಬಾರದು. ಬೆಸ ಸಂಖ್ಯೆಯ ಕಿಟಕಿಗಳು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.
8. ಕಿಟಕಿಗಳನ್ನು ಸೂಕ್ತವಾದ ಜಾಗದಲ್ಲಿ ಇಡುವುದು ಎಷ್ಟು ಮುಖ್ಯವೋ ಕಿಟಕಿಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕಿಟಕಿ ಮುರಿದು ಹೋಗಿದ್ದರೆ ಅಥವಾ ವಕ್ರಗೊಂಡಿದ್ದರೆ ಅಥವಾ ಕಸ ತುಂಬಿಕೊಂಡಿದ್ದರೆ ಮನೆಯ ಬೆಳವಣಿಗೆ ಹಾದಿಯಲ್ಲಿ ಮುಳ್ಳುಗಳೇ ತುಂಬಿರುತ್ತವೆ. ವೈಫಲ್ಯಗಳು ಬಾಧಿಸಬಹುದಾಗಿದೆ.
9. ಕಿಟಕಿಗಳಲ್ಲಿನ ವಾಸ್ತು ದೋಷಗಳು ಆಘಾತ ಕೊಡಲೆಂದೇ ಇರುತ್ತವೆ. ಕಿಟಕಿಯ ವಾಸ್ತು ದೋಷಗಳಿಂದ ಹಠಾತ್ ಘಟನೆಗಳು ನಡೆಯಬಹುದಾಗಿದೆ.
10. ಕಿಟಕಿಯು ತಪ್ಪು ದಿಕ್ಕಿನಲ್ಲಿ ಇರುವುದರಿಂದ ನಿದ್ರೆಗೂ ಸಂಚಕಾರ ಬರುತ್ತದೆ. ಒಳ್ಳೆಯ ನಿದ್ರೆ ಆಗುವುದಿಲ್ಲ. ಅರ್ಧರ್ಧ ನಿದ್ರೆ ನಿಮ್ಮನ್ನು ಕಾಡಲಿದೆ. ಅಲ್ಲದೇ ಮನದೊಳಗೆ ಯಾವುದೋ ಒಂದು ಭಯ ಕಾಡುತ್ತಿರಬಹುದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






