ಮಾಲೀಕನನ್ನೇ ಯಾಮಾರಿಸಿದ ಖತರ್ನಾಕ್ ದಂಪತಿ: ಭರ್ಜರಿ ಶಾಪಿಂಗ್ ಮಾಡಿ ಏನ್ ಮಾಡಿದ್ರೂ ಗೊತ್ತಾ?

ಅಕ್ಟೋಬರ್ 6, 2025 - 22:08
 0  13
ಮಾಲೀಕನನ್ನೇ ಯಾಮಾರಿಸಿದ ಖತರ್ನಾಕ್ ದಂಪತಿ: ಭರ್ಜರಿ ಶಾಪಿಂಗ್ ಮಾಡಿ ಏನ್ ಮಾಡಿದ್ರೂ ಗೊತ್ತಾ?

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಪುಟ್ಟವರಿಂದ ದೊಡ್ಡವರ ತನಕ ಎಲ್ಲರೂ ಡಿಜಿಟಲ್ ಗೆ ಮಾರು ಹೋಗಿದ್ದಾರೆ. ಒಂದು ಕಾಫಿ ಕುಡಿದರೂ ಕೂಡ ಫೋನ್ ಗೆ ಅವಲಂಬಿತರಾಗಿದ್ದಾರೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಮೋಸ ಮಾಡ್ತಿದ್ದಾರೆ. ಅದರಂತೆ ಜಯನಗರದಲ್ಲಿ ಕಿಲಾಡಿ ಜೋಡಿಯೊಂದು ಮಗು ಸಮೇತ ಬಂದು ಅಂಗಡಿಯವರಿಗೆ ಯಾಮಾರಿಸಿರುವ ಘಟನೆ ನಡೆದಿದೆ. ಜಯನಗರ 4th ಟಿ ಬ್ಲಾಕ್ ಅಲ್ಲಿರುವ z square ಸ್ಪೋರ್ಟ್ ಬಟ್ಟೆ & ಶೂ ಮಳಿಗೆಗೆ ಮಗು ಸಮೇತ ಜೋಡಿ ಎಂಟ್ರಿ ಕೊಟ್ಟಿದೆ. 

ಮಗುವಿಗೆ ಬೇಕಾದ ಬಟ್ಟೆ ಖರೀದಿ ಮಾಡಿದ ನಂತರ  ಫೋನ್ ಪೇ ಅಂತ ಫೇಕ್ ಆ್ಯಪ್ ಅಲ್ಲಿ ಮಾಡಿರುವ ಕ್ಯಾಶ್ ಟ್ರಾನ್ಸೆಕ್ಷನ್ ತೋರಿಸಿ ಅಂಗಡಿ ಮಾಲೀಕರಿಗೆ ಯಮಾರಿಸಿದ್ದಾರೆ
ಪೇಮೆಂಟ್ ಸಕ್ಸಸ್ ಅಂತ ಗ್ರೀನ್ ಟಿಕ್ ಬಂದಿದ್ರೂಅಂಗಡಿಯವನ ಖಾತೆಗೆ ಹಣ ಮಾತ್ರ ಜಮೆ ಯಾಗಿರ್ಲಿಲ್ಲ. ಕಿಲಾಡಿಗಳ ಕೈಚಳಕಕ್ಕೆ ಅಂಗಡಿ ಮಾಲೀಕರು ಕಂಗಾಲಾಗಿದ್ದು,ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow