ಯಾರೀ ಹುಡುಗಿ, ಬೆಳ್ಳಂ ಬೆಳ್ಳಿ ಮೈಯ್ಯ ಬೆಡಗಿ: ದೃಷ್ಟಿ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ!

ನವೆಂಬರ್ 17, 2024 - 22:46
 0  15
ಯಾರೀ ಹುಡುಗಿ, ಬೆಳ್ಳಂ ಬೆಳ್ಳಿ ಮೈಯ್ಯ ಬೆಡಗಿ: ದೃಷ್ಟಿ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ!

ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ನಟ ವಿಜಯ್ ಲಲಿತ ಸೂರ್ಯ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದು, ದತ್ತನ ಪಾತ್ರದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. 

ದೃಷ್ಟಿ ಪಾತ್ರಧಾರಿದಲ್ಲಿ ಅಭಿನಯಿಸುತ್ತಿರೋ ನಟಿ ಅರ್ಪಿತಾ ಮೋಹಿತೆ ನಿಜಕ್ಕೂ ಅಪೂರ್ವ ಸುಂದರಿ. ಇತ್ತಿಚೀಗಷ್ಟೇ ಅವರು ಮುದ್ದಾದ ಫೋಟೋಶೂಟ್​ ಮಾಡಿಸಿದ್ದು, ಸೀರೆಯಲ್ಲಿ ಹೊಳೆಯುವ ನಕ್ಷತ್ರದಂತೆ ಕಂಗೊಳಿಸುತ್ತಿದ್ದಾರೆ. ಸೀರಿಯಲ್​ ಸೇಟ್​ನಲ್ಲೂ ದೃಷ್ಟಿ ಫ್ಯಾಮಿಲಿ ಜೊತೆ ಸಖತ್​ ಕ್ಲೋಸ್​ ಆಗಿ ಇರುತ್ತಾರೆ

ಇನ್ನೂ ದೃಷ್ಟಿಬೊಟ್ಟು ಸ್ಟೋರಿಗೆ ಬರೋದಾದ್ರೇ, ದತ್ತನ ಗುಣ, ಸರಳತೆ ದೃಷ್ಟಿ ಮನಸ್ಸು ಕದಡಿಸಿದೆ. ದೃಷ್ಟಿ ಹೃದಯದ ತುಂಬಾ ದತ್ತನ ಕನವರಿಕೆ ಶುರುವಾಗಿದೆ. ಮತ್ತೊಂದು ಕಡೆ ದೃಷ್ಟಿಯಲ್ಲಿ ಆಗ್ತಿರೋ ಬದಲಾವಣೆ ಕಂಡು ತಾಯಿ ಚನ್ನಮ್ಮ ಆತಂಕದಲ್ಲಿ ಇದ್ದಾಳೆ. ದೃಷ್ಟಿಗೆ ಉಳಿತು ಕೆಡುಕು ಬಗ್ಗೆ ಪಾಠ ಮಾಡ್ತಿದ್ದಾಳೆ. ಈ ನಡುವೆ ಸ್ಟೋರಿಲಿ ಹೊಸ ಟ್ವಿಸ್ಟ್​ ಬರಲಿದೆ.

ಕಳೆದು ಹೋಗಿರೋ ದೃಷ್ಟಿ ಅಕ್ಕನ ಸುಳಿವು ಸಿಕ್ಕಿದ್ದು, ದತ್ತನ ಬದುಕಿಗೂ ದೃಷ್ಟಿ ಅಕ್ಕನಿಗೂ ಪ್ಲ್ಯಾಶ್​ ಬ್ಯಾಕ್​ ಸ್ಟೋರಿ ಇದ್ಯಾ? ಇಷ್ಟು ದಿನ ಇಲ್ಲಿದ್ದಳೂ ದೃಷ್ಟಿ ಅಕ್ಕ ಹೀಗೇ ಕುತೂಹಲದ ಅಂಶಗಳು ಒಂದೊಂದಾಗಿ ತೆರೆದುಕೊಳ್ಳಲಿವೆ. ಒಟ್ಟಿನಲ್ಲಿ ದೃಷ್ಟಿಗೆ ಜೀವ ತುಂಬಿರೋ ಅರ್ಪಿತಾ ಚಂದಕ್ಕೆ ಫಿದಾ ಆಗಿರೋ ಫ್ಯಾನ್ಸ್, ಮೇಡಮ್​ ಮೊದಲು ನೀವೂ ದೃಷ್ಟಿ ಬೊಟ್ಟು ಇಟ್ಟುಕೊಳ್ಳಿ ಅಂತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow