ಯುವ ನಿರ್ದೇಶಕನಿಂದ ತಲೈವಾಗೆ ಆ್ಯಕ್ಷನ್ ಕಟ್... ಸದ್ದು ಮಾಡಿದ ಸುದ್ದಿ!

ಯುವ ನಿರ್ದೇಶಕನ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗೆಗಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿದೆ.
ವಯಸ್ಸಾದ್ರೂ ಕೂಡ ತಲೈವಾ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಂಟೆಂಟ್ ಹೊತ್ತು ಅವರು ಬರುತ್ತಾರೆ. ಅಂತಹದ್ದೇ ಭಿನ್ನವಾಗಿರುವ ಚಿತ್ರಕ್ಕೆ ತಲೈವಾ ಓಕೆ ಎಂದಿದ್ದಾರಂತೆ. ಅಂತೆ ಸುಂದರಣಿಕಿ, ಸರಿಪೋಧಾ ಶನಿವಾರಂ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವಿವೇಕ್ ಅತ್ರೇಯ ಈಗ ತಲೈವಾ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳನ್ನು ಮುಗಿಸಿದ ಬಳಿಕ ವಿವೇಕ್ ಜೊತೆ ತಲೈವಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿದೆಯಾ ಕಾದುನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






