ರಜತ್ ಕ್ಯಾಪ್ಟನ್ಸಿ ಬಗ್ಗೆ ಕೊಹ್ಲಿ ಮುನಿಸು!? ಮೈದಾನದಲ್ಲೇ ಕೋಪಿಸಿಕೊಂಡ ವಿರಾಟ್, ಕೈಮುಗಿದದ್ದು ಯಾರಿಗೆ?

ಎಪ್ರಿಲ್ 26, 2025 - 09:02
 0  56
ರಜತ್ ಕ್ಯಾಪ್ಟನ್ಸಿ ಬಗ್ಗೆ ಕೊಹ್ಲಿ ಮುನಿಸು!? ಮೈದಾನದಲ್ಲೇ ಕೋಪಿಸಿಕೊಂಡ ವಿರಾಟ್, ಕೈಮುಗಿದದ್ದು ಯಾರಿಗೆ?

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಈ ಸೀಸನ್ ನಲ್ಲಿ ಅತ್ಯದ್ಭುತವಾಗಿ ಕ್ಯಾಪ್ಟನ್ಸಿ ನಿಭಾಯಿಸುವಲ್ಲಿ ರಜತ್ ಪಾಟಿದಾರ್ ಯಶಸ್ವಿಯಾಗಿದ್ದಾರೆ. ಆದ್ರೆ ಕೊಹ್ಲಿ ಮಾತ್ರ ರಜತ್ ಕ್ಯಾಪ್ಟನ್ಸಿ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ. 

ಎಸ್, ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಅವಧಿಯಲ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್​ ಮೇಲೆ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ರಜತ್ ಪಾಟೀದಾರ್​ ತೆಗೆದುಕೊಳ್ಳುವ ಕೆಲವು ನಿರ್ಧಾರಕ್ಕೆ ಕೊಹ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಪಂದ್ಯದ ಅವಧಿಯಲ್ಲಿ ಆಗಾಗ ವೈರಲ್ ಆಗುವ ಫೋಟೋ ಮತ್ತು ವಿಡಿಯೋಗಳು..

ಗುರುವಾರ ವಿರಾಟ್ ಕೊಹ್ಲಿ ಬೇಸರದಲ್ಲಿರುವ ಫೋಟೋ ವಿಡಿಯೋಗಳು ವೈರಲ್ ಆಗ್ತಿವೆ. ಫೋಟೋ ಒಂದರಲ್ಲಿ ಮುಖ್ಯ ಕೋಚ್ ಮತ್ತು ಮೆಂಟರ್​ ಎದರು ತಲೆ ತಗ್ಗಿಸಿ ಕೈಮುಗಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಇದನ್ನು ನೋಡಿದ ಕೆಲವು ಅಭಿಮಾನಿಗಳು, ವಿರಾಟ್ ಹೀಗೆ ಮಾಡಬಾರದು.

ಕ್ಯಾಪ್ಟನ್ ರಜತ್ ಪಾಟೀದಾರ್ ನಿರ್ಧಾರದ ಮೇಲೆ ಅಸಮಾಧಾನ ವ್ಯಕ್ತವಾದಂತೆ ಇದೆ. ರಜತ್ ಪಾಟೀದಾರ್ ತಾವು ಏನು ಅನ್ನೋದನ್ನು ಪ್ರೂವ್ ಮಾಡಿಕೊಂಡಿದ್ದಾರೆ. ಕೊಹ್ಲಿ ರಜತ್​ಗೆ ಮುಕ್ತವಾಗಿ ಕ್ಯಾಪ್ಟನ್ಸಿ ಮಾಡಲು ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ಶುರುವಾಗಿದೆ.

ಮಾತ್ರವಲ್ಲ, ಪಂಜಾಬ್ ವಿರುದ್ಧ ಬೆಂಗಳೂರಲ್ಲಿ ಸೋತಾಗಲೂ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪಂದ್ಯ ಸೋಲುವ ಹೊತ್ತಿಗೆ ಮೈದಾನದಲ್ಲೇ ದಿನೇಶ್ ಕಾರ್ತಿಕ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಇದನ್ನು ನೋಡಿದ ಕೆಲವು ಅಭಿಮಾನಿಗಳು, ರಜತ್ ಪಾಟೀದಾರ್ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಅರ್ಥೈಸಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow