ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆಗೆ ಮುಂದಾದ BBMP ಕಸದ ವಾಹನ ಚಾಲಕರು!

ಡಿಸೆಂಬರ್ 4, 2024 - 12:12
 0  3
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆಗೆ ಮುಂದಾದ BBMP ಕಸದ ವಾಹನ ಚಾಲಕರು!

ಬೆಂಗಳೂರು:- ತಮ್ಮ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ BBMP ಕಸದ ವಾಹನ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. 

ಖಾಯಂ ಉದ್ಯೋಗ ನೀಡುವಂತೆ ಆಗ್ರಹಿಸಿ ಅರೆಕಾಲಿಕ ಚಾಲಕರು, ಸಹಾಯಕರು ಫ್ರೀಡಂ ಪಾರ್ಕ್​​ನಲ್ಲಿ ಧರಣಿಗೆ ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಕಸದ ವಾಹನದ ಚಾಲಕರು, ಸಹಾಯಕರಿಗೆ ಖಾಯಂ ಗ್ಯಾರಂಟಿ ನೀಡಿತ್ತು. ಆದರೆ ಇದುವರೆಗೆ ಯಾವುದೇ ಗ್ಯಾರಂಟಿಯ ಭರವಸೆ ನೀಡಿಲ್ಲ. ನಮಗೆ ಕಡಿಮೆ ಸಂಬಳ ಇದೆ. ಜೀವನ ನಡೆಸುವುದು ಹೇಗೆ? ಹೀಗಾಗಿ ನಮ್ಮ ಕೆಲಸಕ್ಕೆ ಭದ್ರತೆ ಬೇಕು. ಖಾಯಂ ಆದೇಶ ನೀಡುವವರೆಗೂ ವಾಹನ ಚಲಾವಣೆ ಮಾಡಲ್ಲ ಎಂದು ಚಾಲಕರು ಪಟ್ಟು ಹಿಡಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 593 ಕಾಂಪ್ಯಾಕ್ಟರ್ ವಾಹನ ಚಾಲಕರು, 9,300 ಆಟೊ ಟಿಪ್ಪರ್ ಚಾಲಕರು ಮತ್ತು ಸಹಾಯಕರು, 1,800 ಲೋಡರ್‌ಗಳಿಗೂ ಕಾಯಂ ಉದ್ಯೋಗ ನೀಡಬೇಕು ಎಂದು ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಒಕ್ಕೂಟದ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯರು ಸರ್ಕಾರಕ್ಕೆ ಮೇಲೆ ಒತ್ತಾಯಿಸಿದ್ದರು. ಹಾಗೂ ಈ ಬಗ್ಗೆ ಬಿಬಿಎಂಪಿಯ SWM ವಿಭಾಗದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಆದರೆ ಈ ಮನವಿಗೆ, ಬಿಬಿಎಂಪಿ ಆಗಲಿ, ಅಥವಾ ಸರ್ಕಾರ ಗಮನ ಕೊಟ್ಟಿಲ್ಲ ಎಂದು ಆರೋಪಿಸಿ ನೌಕರರು ಇದೀಗ ಮುಷ್ಕರಕ್ಕೆ ಮುಂದಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow