ಸಂಜು ಸ್ಯಾಮ್ಸನ್​​ಗೆ ಬಿಗ್​ ಶಾಕ್​ ಕೊಟ್ಟ ರಾಜಸ್ಥಾನ್​​ ರಾಯಲ್ಸ್​​; ಕ್ಯಾಪ್ಟನ್ಸಿಯಿಂದಲೇ ಕೊಕ್..​​!

ಆಗಸ್ಟ್ 24, 2024 - 12:37
 0  11
ಸಂಜು ಸ್ಯಾಮ್ಸನ್​​ಗೆ ಬಿಗ್​ ಶಾಕ್​ ಕೊಟ್ಟ ರಾಜಸ್ಥಾನ್​​ ರಾಯಲ್ಸ್​​; ಕ್ಯಾಪ್ಟನ್ಸಿಯಿಂದಲೇ ಕೊಕ್..​​!
FOCUS KARNATAKA Sanju Samson

ಸಂಜು ಸ್ಯಾಮ್ಸನ್​​ಗೆ ಬಿಗ್​ ಶಾಕ್​ ಕೊಟ್ಟ ರಾಜಸ್ಥಾನ್​​ ರಾಯಲ್ಸ್​​; ಕ್ಯಾಪ್ಟನ್ಸಿಯಿಂದಲೇ ಕೊಕ್..​​!

#Focuskarnataka #SanjuSamson #ipl2025megaauction #ipl #RajasthanRoyals


ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ಗೆ ಇನ್ನೇನು ಕೇವಲ 6 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ ಐಪಿಎಲ್​​ ಮೆಗಾ ಆಕ್ಷನ್​ ನಡೆಯಲಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಐಪಿಎಲ್​​ ತಂಡಗಳಿಗೂ 4+2 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಮಧ್ಯೆ ಕ್ಯಾಪ್ಟನ್​​ ಸಂಜು ಸ್ಯಾಮ್ಸನ್​​ಗೆ ರಾಜಸ್ಥಾನ್​ ರಾಯಲ್ಸ್​​​ ಬಿಗ್​ ಶಾಕ್​ ನೀಡಿದೆ.

ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾಗೆ ಸಂಜು ಸ್ಯಾಮ್ಸನ್​ ಆಯ್ಕೆ ಆಗಿದ್ದರು. ಪಂತ್​​ ಅವರನ್ನು ಬೆಂಚ್​​ ಕಾಯಿಸಿ 2 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಯ್ತು. ಆದ್ರೂ ಕಳಪೆ ಪ್ರದರ್ಶನ ನೀಡಿದ್ದು, ಸಂಜು ಸ್ಯಾಮ್ಸನ್​​ ತಂಡ ತನ್ನ ಮೇಲಿಟ್ಟಿದ್ದ ಭರವಸೆಯನ್ನು ಕಳೆದುಕೊಂಡರು. ಹಾಗಾಗಿ ಸಂಜು ಸ್ಯಾಮ್ಸನ್​ ಅವರನ್ನು 2024ರ ದುಲೀಪ್​​ ಟ್ರೋಫಿಗೂ ಆಯ್ಕೆ ಮಾಡಿಲ್ಲ. ಇದು ಸಂಜು ಸ್ಯಾಮ್ಸನ್​​ ಐಪಿಎಲ್​ ಕರಿಯರ್​ ಮೇಲೂ ಪರಿಣಾಮ ಬೀರಿದೆ.

ಸಂಜು ಸ್ಯಾಮ್ಸನ್​ ಅವರನ್ನು ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಆಗಿ 2021ರಲ್ಲಿ ನೇಮಕ ಮಾಡಲಾಯ್ತು. ಸಂಜು ಸ್ಯಾಮ್ಸನ್​​ ನಾಯಕತ್ವದಲ್ಲಿ ರಾಜಸ್ಥಾನ್​​ 2 ಬಾರಿ ಸೆಮಿ ಫೈನಲ್ಸ್​ ಮತ್ತು 1 ಬಾರಿ ಫೈನಲ್​ ತಲುಪಿದೆ. ಕಳೆದ ಸೀಸನ್​ನಲ್ಲೂ ಸಂಜು ರಾಜಸ್ಥಾನ್​​ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು.

ರಾಜಸ್ಥಾನ್​​ ರಾಯಲ್ಸ್​ ತಂಡದ ನೂತನ ಕ್ಯಾಪ್ಟನ್​ ಆಗಿ ಜೋಸ್​ ಬಟ್ಲರ್​ ನೇಮಕಗೊಳ್ಳಲಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್​ ನೀಡಲಾಗುತ್ತಿದೆ. ಇವರು ಮುಂದಿನ ಸೀಸನ್​ಗೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow