ಸೈಫ್ ಅಲಿಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶಂಕಿತ ಕೊನೆಗೂ ಅರೆಸ್ಟ್!

ಜನವರಿ 17, 2025 - 12:02
 0  8
ಸೈಫ್ ಅಲಿಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶಂಕಿತ ಕೊನೆಗೂ ಅರೆಸ್ಟ್!

ಬಾಲಿವುಡ್ ನಟ ಸೈಫ್ ಅಲಿಖಾನ್ ಮನೆಗೆ ನುಗ್ಗಿದ ಕಳ್ಳನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆರೋಫಿಯನ್ನು ಬಂಧಿಸಲಾಗಿದೆ. ಸದ್ಯ ಬಾಂದ್ರಾ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದಾರೆ. ಅಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ.

ದಾಳಿ ಮಾಡಿದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಆತ ಏನಾದರೂ ಪ್ರಮುಖ ವಿಚಾರ ರಿವೀಲ್ ಮಾಡುತ್ತಾನೋ ಎನ್ನುವ ಕುತೂಹಲ ಮೂಡಿದೆ.

ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ವ್ಯಕ್ತಿಯ ಫೋಟೋವನ್ನು ಮುಂಬೈ ಪೊಲೀಸರು ಬಹಿರಗಂಪಡಿಸಿದ್ದರು. ಗುರುವಾರ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ. ಶಂಕಿತ ವ್ಯಕ್ತಿಯು ಟಿ-ಶರ್ಟ್​ ಮತ್ತು ಜೀನ್ಸ್ ಧರಿಸಿದ್ದ. ಆತನ ಈಗ ತ್ವರಿತವಾಗಿ ಬಂಧಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow