ಹೆಂಡ್ತಿ ಸ್ನಾನ ಮಾಡುವಾಗ ಹಿಂದಿನಿಂದ ಚೂರಿಯಿಂದ ಇರಿದು ಬರ್ಬರ ಕೊಲೆಗೈದ ಗಂಡ

ಸೆಪ್ಟೆಂಬರ್ 24, 2025 - 22:01
 0  18
ಹೆಂಡ್ತಿ ಸ್ನಾನ ಮಾಡುವಾಗ ಹಿಂದಿನಿಂದ ಚೂರಿಯಿಂದ ಇರಿದು ಬರ್ಬರ ಕೊಲೆಗೈದ ಗಂಡ

ತಿರುವನಂತಪುರಂ:- ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗಂಡನೊಬ್ಬ ಪತ್ನಿ ಸ್ನಾನ ಮಾಡುವಾಗ ಹಿಂದಿನಿಂದ ಬಂದು ಚೂರಿಯಲ್ಲಿ ಇರಿದು ಆಕೆಯನ್ನು ಹತ್ಯೆ ಮಾಡಿರುವ ಘಟನೆ ಜರುಗಿದೆ.

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ, ತಾನು ಕ್ರೂರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಹಿಳೆಯನ್ನು 39 ವರ್ಷದ ಶಾಲಿನಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 6.30 ರ ಸುಮಾರಿಗೆ ಶಾಲಿನಿ ಸ್ನಾನ ಮಾಡುತ್ತಿದ್ದಾಗ, ಆಕೆಯ ಪತಿ ಹಠಾತ್ತನೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ದಂಪತಿಯ 19 ವರ್ಷದ ಮಗ ಪೊಲೀಸರಿಗೆ ದೂರು ನೀಡಿದ್ದಾನೆ.

ದೂರಿನ ಆಧಾರದ ಮೇಲೆ, ಆರೋಪಿ ಐಸಾಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಾಲಿನಿ ಸ್ನಾನ ಮಾಡಲು ಹೋದಾಗ, ಆರೋಪಿಯು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕುತ್ತಿಗೆ, ಎದೆ ಮತ್ತು ಬೆನ್ನಿಗೆ ಆಳವಾದ ಗಾಯಗಳಾಗಿವೆ ಎಂದು ಎಫ್‌ಐಆರ್​​ನಲ್ಲಿ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow