ಹೆಜ್ಜೇನು ದಾಳಿ: 7 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ!

ಶಿವಮೊಗ್ಗ:- ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆದಿದ್ದು, ಓರ್ವನ ಸ್ಥಿತಿ ಗಂಭೀರವಾದ ಘಟನೆ ಜರುಗಿದೆ. ಚಿಕ್ಕಪೇಟೆನಗರದ ಭಾಷಾ ಎಂಬುವವರ ಮನೆ ಸಮೀಪ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಹೆಜ್ಜೇನು ದಾಳಿ ನಡೆಸಿದೆ.
ಭಾಷಾ, ಪತ್ನಿ ಅಸ್ಮಾ, ಮಕ್ಕಳಾದ ಆರೀಫ್, ಅನೀಫ್, ಭಾಷಾ ಪಕ್ಕದ ಮನೆ ನಿವಾಸಿ ಯಾಸೀನ್, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್, ಬಾಬಾ ಸಾಬ್ ಮೇಲೆ ದಾಳಿ ನಡೆಸಿದೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. 68 ವರ್ಷದ ಹುಸೇನ್ ಸಾಬ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






