ಹೈಕಮಾಂಡ್ ಗೆ ಹೆದರಿಕೊಂಡು ಮತ್ತೆ ಜಾತಿಗಣತಿಗೆ ಮುಂದಾಗಿದ್ದಾರೆ: ಹೆಚ್ ವಿಶ್ವನಾಥ್ ಕಿಡಿ

ಮೈಸೂರು: ಹೈಕಮಾಂಡ್ ಗೆ ಹೆದರಿಕೊಂಡು ಮತ್ತೆ ಜಾತಿಗಣತಿಗೆ ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹತ್ತು ವರ್ಷದ ಹಿಂದೇಯೇ ಜಾತಿವಾರು ಜನಗಣತಿ ಮಾಡಿಸಿದ್ದರು.
ಒಂದುವರೆ ಲಕ್ಷ ಶಿಕ್ಷಕರು 2 ವರ್ಷ ಗಣತಿ ಮಾಡಿದ್ದರು. ಅದಕ್ಕೆ 170 ಕೋಟಿಗೂ ಅಧಿಕ ಹಣ ಖರ್ಚಾಗಿತ್ತು. ಆಗಿನಿಂದಲೂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು. ಇದೀಗ ಹೈಕಮಾಂಡ್ ಗೆ ಹೆದರಿಕೊಂಡು ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ.
ಇದೀಗ ಮತ್ತೆ ಜಾತಿಗಣತಿ ಮಾಡುವುದು ಹೇಗೆ ಸಾಧ್ಯ? ಜಾತಿಗಣತಿ ಮಾಡಲು ಶಿಕ್ಷಕರು ಬೇಕು.ಈಗ ತಾನೇ ಶಾಲೆಗಳು ಆರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಾಗೋದಿಲ್ಲ. ಸಿದ್ದರಾಮಯ್ಯ ಹಾವಾಡಿಗನ ರೀತಿ ಈಗ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






