ʻಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದು ಹೇಗೆ?

ಸೆಪ್ಟೆಂಬರ್ 28, 2025 - 18:01
 0  10
ʻಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದು ಹೇಗೆ?

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ರುಕ್ಮಿಣಿ, ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿ ತೋರಿದ ತಮ್ಮ ಅಭಿನಯವೇ ‘ಕಾಂತಾರ: ಚಾಪ್ಟರ್ 1’ ಅವಕಾಶಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಆ ಚಿತ್ರದ ಎರಡೂ ಭಾಗಗಳ ಪ್ರೀಮಿಯರ್‌ ಶೋಗೆ ಹಾಜರಾದ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಿ, ಅವರ ಹೆಸರನ್ನೇ ನಾಯಕಿಯಾಗಿ ಸೂಚಿಸಿದ್ದರು.

ಪಾತ್ರಗಳ ಆಯ್ಕೆ ಬಗ್ಗೆ ಚರ್ಚೆ ನಡೆಯುವಾಗ ರಿಷಬ್ ಅವರೇ ರುಕ್ಮಿಣಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬಳಿಕ ಎಲ್ಲರೂ ರುಕ್ಮಿಣಿ ಅವರನ್ನು ನಾಯಕಿಯಾಗಿ ಹಾಕಿಕೊಳ್ಳಬಹುದು ಎಂದಾಗ ಅವರನ್ನು ಸಂಪರ್ಕಿಸಿ, ಕತೆ ಹೇಳಲಾಯ್ತಂತೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಹೊಸ ವಿಷಯಗಳನ್ನು ಕಲಿಯಬೇಕಾಯ್ತು, ಸಾಕಷ್ಟು ಶ್ರಮ ಪಡಬೇಕಾಯ್ತು ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ನಟಿಸಲು ನಾನು ಕುದುರೆ ಸವಾರಿ, ಕತ್ತಿ ವರಸೆ, ಕರಾವಳಿ ಭಾಗದ ಭಾಷೆ ಮತ್ತು ಕೆಲವು ಆಕ್ಷನ್ ದೃಶ್ಯಗಳನ್ನು ಕಲಿಯಬೇಕಾಯಿತು. ಅಲ್ಲಿನ ಇತಿಹಾಸ, ಸಂಸ್ಕೃತಿಯ ಪರಿಚಯ ನನಗೆ ಆಯಿತು. ಶೂಟಿಂಗ್ ಸಮಯದಲ್ಲಿ ರಿಷಬ್ ಶೆಟ್ಟಿ ಮತ್ತು ಇತರ ಕಲಾವಿದರು ನನಗೆ ತುಂಬಾ ಸಹಾಯ ಮಾಡಿದರು" ಎಂದು ರುಕ್ಮಿಣಿ ಹೇಳಿದ್ದಾರೆ.

ಕಾಂತಾರ: ಚಾಪ್ಟರ್ 1’ ಸಿನಿಮಾನ ಅಕ್ಟೋಬರ್ 02 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕರ್ನಾಟಕದವರೇ ಆದರೂ ಬಾಲಿವುಡ್​​ನಲ್ಲಿ ಮಿಂಚುತ್ತಿರುವ ಗುಲ್ಶನ್ ದೇವಯ್ಯ, ತಮಿಳು ನಟ ಜಯರಾಂ, ನಟ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಸಿನಿಮಾಟೊಗ್ರಫಿ ಸಿನಿಮಾಕ್ಕೆ ಇದೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow