ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಚೈತ್ರಾ ವಾಸುದೇವನ್..!

ಕನ್ನಡ ಜನಪ್ರಿಯ ಆ್ಯಂಕರ್, ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅಭಿಮಾನಿಗಳಿಗೆ ಇತ್ತೀಚೆಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದರು. ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು.
ಇದೀಗ ಚೈತ್ರಾ ವಾಸುದೇವ್ ಹಾಗೂ ಎಂಜಿನಿಯರ್ ಜಗದೀಪ್ ವಿವಾಹವಾದರು. ನಿರೂಪಕಿ ಚೈತ್ರಾಗೆ ಇದು ಎರಡನೇ ವಿವಾಹ. ಬೆಂಗಳೂರಿನಲ್ಲಿ ವಿವಾಹ ನಡೆದಿದ್ದು, ಇಂದೇ ರಿಸೆಪ್ಷನ್ ಸಹ ನಡೆಯಲಿದೆ. ಮದುವೆಗೆ ಕೆಲವು ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು.
ಚೈತ್ರಾ ವಾಸುದೇವ್ ಅವರು ಕಿರುತೆರೆ ನಿರೂಪಕಿ ಆಗಿರುವ ಜೊತೆಗೆ ಉದ್ಯಮಿಯೂ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಈ ಜೋಡಿ ಪ್ಯಾರಿಸ್ಗೆ ಹೋಗಿ ಅಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ದರು.
ಚೈತ್ರಾ ವಾಸುದೇವನ್ ಅವರು ಈಗಾಗಲೇ ಸತ್ಯ ನಾಯ್ಡು ಎನ್ನುವರನ್ನು ಮದುವೆ ಆಗಿದ್ದರು. ಆ ನಂತರ ಸಂಸಾರದಲ್ಲಿನ ಸಮಸ್ಯೆಗಳಿಂದ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಅಪ್ಪ- ಅಮ್ಮನ ಆಸೆಯಂತೆ ಮೊದಲ ಅರೇಂಜ್ ಮ್ಯಾರೇಜ್ ಆಗಿದ್ದರು. ಆದ್ರೆ ಅದು ಮುರಿದು ಬಿದ್ದಿತ್ತು. ಈ ಬಾರಿ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಜಗದೀಪ್ ಅವರನ್ನು ಮದುವೆ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






