ಅದ್ದೂರಿಯಾಗಿ ನೂತನ ಮನೆಯ ಪ್ರವೇಶ ಮಾಡಿದ ನಟಿ ನಿಶಾ ರವಿಕೃಷ್ಣನ್..!

ಸ್ಯಾಂಡಲ್ವುಡ್ನ ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟಿ ನಿಶಾ ಕೃಷ್ಣನ್ ಬೆಳ್ಳಿ ತೆರೆಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ನಟಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಸೀರಿಯಕ್ ಮೂಲಕ ಮಿಂಚುತ್ತಿದ್ದಾರೆ. ಇದರ ಬೆನ್ನಲ್ಲೇ ತಾವು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕನಸಿನ ಮನೆಯನ್ನು ಕಟ್ಟಿಸಿಕೊಂಡು ಅದರ ಗೃಹಪ್ರವೇಶ ಮಾಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
ನಿಶಾ ಅವರು 2018ರಲ್ಲಿ ಕಿರುತೆರೆಗೆ ಕಾಲಿಟ್ಟರು. ‘ಸರ್ವ ಮಂಗಲ ಮಾಂಗಲ್ಯೆ’ ಅವರ ನಟನೆಯ ಮೊದಲ ಧಾರಾವಾಹಿ. ಈ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಂಡಿತು. 2019ರವರೆಗೆ ಈ ಧಾರಾವಾಹಿ ಪ್ರಸಾರ ಆಯಿತು. 2019ರಲ್ಲಿ ಅವರು ಜೀ ಕನ್ನಡದಲ್ಲಿ ‘ಗಟ್ಟಿಮೇಳ’ ಸೀರಿಯಲ್ ಮಾಡಿದರು. ಈ ಧಾರಾವಾಹಿಯಲ್ಲಿ ಅವರು ಅಮೂಲ್ಯ ಹೆಸರಿನ ಪಾತ್ರ ಮಾಡಿದರು. ಐದು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿ ಮೂಲಕ ರೌಡಿ ಬೇಬಿ ಎಂದೇ ಅವರು ಫೇಮಸ್ ಆದರು.
ನಿಶಾ ಅವರು ಸದ್ಯ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಡಾಕ್ಟರ್ ಪಾರ್ವತಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಹಳ್ಳಿ ಹಿನ್ನೆಲೆಯಲ್ಲಿ ಸಾಗುತ್ತಿದ್ದು, ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇನ್ನು ನಿಶಾ ಅವರು ತೆಲುಗು ಕಿರುತೆರೆಯಲ್ಲೂ ಫೇಮಸ್ ಆಗಿದ್ದಾರೆ. ‘ಅಮ್ಮಾಯಿಗಾರು’ ಹೆಸರಿನ ಜೀ ತೆಲುಗು ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






