ಆಟೋ ಚಾಲಕನಿಗೆ ನಡುರಸ್ತೆಯಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ!ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೋಟ್ಯಾಂತರ ಜನರಿಗೆ ಅನ್ನ, ನೀರು, ಉದ್ಯೋಗ ಕೊಟ್ಟ ಮಾಯಾನಗರಿ. ಇಲ್ಲಿ ಭಾಷೆ, ಧರ್ಮ, ಗಡಿಗಳನ್ನು ಮೀರಿದ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರ ಅತಿರೇಕದ ವರ್ತನೆಯಿಂದ ಬೆಂಗಳೂರಿಗರು ಹಾಗೂ ಕನ್ನಡಿಗರನ್ನು ಕೆಣಕುವ ಕೆಲಸಗಳಾಗುತ್ತಿವೆ.
ಹೊರ ರಾಜ್ಯದ ಯುವತಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ನಡೆದಿದೆ. ಸ್ಕೂಟಿಗೆ ಆಟೋ ಟಚ್ ಆಗುತ್ತೆಂದು ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಯುವತಿ ಚೆಪ್ಪಲಿಯಿಂದ ಹೊಡೆಯುವ ವಿಡಿಯೋ ಆಟೋ ಚಾಲಕನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ.
ಈಗ ಮಹಿಳೆಯನ್ನ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ, ಮಹಿಳೆ ಪನ್ಪೂರಿ ಮಿಶ್ರಾ, ಬಿಹಾರ ಮೂಲದ ಮಹಿಳೆ ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಾಗಿದ್ದಾಳೆ. ಗರ್ಭಿಣಿ ಆಗಿರುವ ಮಹಿಳೆ ಆಸ್ಪತ್ರೆಗೆ ತೆರಳಿ ಬರುತ್ತಿದ್ದಳು. ಈ ವೇಳೆ ಮಹಿಳೆಯ ದ್ವಿ ಚಕ್ರ ವಾಹನಕ್ಕೆ ಹಿಂದಿನಿಂದ ಆಟೋ ಡಿಕ್ಕಿಯಾಗಿತ್ತು. ಇದನ್ನ ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರ್ ಬೈದೆ. ಈ ವೇಳೆ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದ್ದೇನೆ ಅಂತ ಬೆಳ್ಳಂದೂರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ. ಸದ್ಯ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






