ಆಧಾರ್ ಹೊಂದಿರೋ ಜನರೇ ಹುಷಾರ್! ನಿಮಗೆ ಗೊತ್ತಿಲ್ಲದೇ ಯಾಮಾರಿಸಿ ಬಿಡ್ತಾರೆ ಮರ್ರೆ!

ಕರ್ನಾಟಕದಲ್ಲಷ್ಟೇ ಅಲ್ಲ ಇಡೀ ದೇಶದಲ್ಲಿ ಆಧಾರ್ ಕಾರ್ಡ್ ಇಲ್ಲದೇ ಸರ್ಕಾರದ ಯಾವುದೇ ಸ್ಕೀಮ್ ಪಡೆಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಆಧಾರ್ ಕಾರ್ಡ್ ಮಹತ್ವ ಹೊಂದಿದೆ.
ದೇಶದಲ್ಲಿರುವ ಅತ್ಯಂತ ಗುರುತಿನ, ಮಹತ್ವದ ಡಾಕ್ಯುಮೆಂಟ್ ಅಂದ್ರೆ ಆಧಾರ್ ಕಾರ್ಡ್. ಸ್ಕೂಲ್ ಅಡ್ಮಿಷನ್ನಿಂದ ಹಿಡಿದು, ಉದ್ಯೋಗಕ್ಕೆ ಸೇರುವುದರಿಂದ ಹಿಡಿದು ಎಲ್ಲೆಲ್ಲೂ ಆಧಾರ್ ಬೇಕು. ನಮ್ಮ ಅಸ್ತಿತ್ವದ ಗುರುತಿನ ಚೀಟಿ ಅಂದರೆ ಅದುವೇ ಆಧಾರ್ ಅಂದ್ರೆ ತಪ್ಪಾಗೋದಿಲ್ಲ.
ಹೋಟೆಲ್ನಂಥ ಸ್ಥಳಗಳಲ್ಲಿ ರೂಮ್ಸ್ ಬುಕ್ ಮಾಡುವಾಗ ಗುರುತಿನ ಐಡಿಯಾಗಿ ಆಧಾರ್ ನೀಡ್ತೀರಿ. ಇದೇ ನಿಮಗೆ ಮುಳುವಾದರೂ ಅಚ್ಚರಿ ಇಲ್ಲ. ಅನಧಿಕೃತ ಸ್ಥಳಗಳಲ್ಲಿ ಗುರುತಿನ ಚೀಟಿ ಎಂದು ಆಧಾರ್ ಕಾರ್ಡ್ ನೀಡೋದು ತುಂಬಾನೇ ಡೇಂಜರ್. ಆಧಾರ್ನಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಇರುತ್ತವೆ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕಾರ್ಡ್ನಲ್ಲಿರುವ ಮಾಹಿತಿ ಮೂಲಕ ಸುಲಭವಾಗಿ ನಿಮ್ಮ ಬ್ಯಾಂಕ್ ವಿವರಗಳನ್ನು ಪಡೆದುಕೊಳ್ಳುತ್ತಾರೆ.
ಒಂದು ವೇಳೆ ಅಪರಿಚಿತರಿಗೆ ಒರಿಜಿನಲ್ ಆಧಾರ್ ಕಾರ್ಡ್ ನೀಡಿದರೆ ನಿಮ್ಮಿಂದ ದೊಡ್ಡ ತಪ್ಪು ಆಗಿದೆ ಎಂದರ್ಥ. ಹೋಟೆಲ್, ಕ್ಲಬ್, ಫ್ಲೈಟ್, ಟ್ರೈನ್ ಸೇರಿದಂತೆ ವಿವಿಧ ಕಡೆ ಒರಿಜಿನಲ್ ಆಧಾರ್ ನೀಡೋದನ್ನು ತಪ್ಪಿಸಿಕೊಳ್ಳಿ. ಒಂದು ವೇಳೆ ಒರಿಜಿನಲ್ ಕಾರ್ಡ್ ನೀಡುವ ಪ್ರಮಯ ಬಂದರೆ ಮಾಸ್ಕ್ಡ್ ಆಧಾರ್ ನೀಡಿ..
Masked Aadhar Card ಕಾನ್ಸೆಪ್ಟ್ ಬಹುತೇಕರಿಗೆ ಗೊತ್ತಿಲ್ಲ. ಇದು ಕೂಡ ನಿಮ್ಮ ಒರಿಜಿನಲ್ ಆಧಾರ್ ಕಾಪಿಯಾಗಿದ್ದು, UIDAIನಿಂದ ಗುರುತಿಸಲ್ಪಟ್ಟಿರುತ್ತದೆ. ಅದನ್ನು ನೀವು ಸುಲಭವಾಗಿ ಐಡಿ ಪ್ರೂಫ್ ಆಗಿ ಬಳಸಬಹುದು. ಈ ಕಾರ್ಡ್ನಲ್ಲಿ ಆಧಾರ್ನ ಮೊದಲ 8 ನಂಬರ್ಸ್ ಬ್ಲರ್ ಆಗಿರುತ್ತವೆ. ಇದರಿಂದ ಯಾರೂ ಮಿಸ್ ಯ್ಯೂಸ್ ಮಾಡಲು ಸಾಧ್ಯವಿಲ್ಲ.ಹೀಗಾಗಿ ಗುರುತು ಪರಿಚಯ ಇಲ್ಲದವರಿಗೆ ಆಧಾರ್ ಕೊಡೋ ಮುನ್ನ ಸ್ವಲ್ಪ ಹುಷಾರಾಗಿರಿ
ನಿಮ್ಮ ಪ್ರತಿಕ್ರಿಯೆ ಏನು?






