ಇದು ಜೈಲೋ ಅಥವಾ ಬಾರೋ: ಕೈದಿಗಳ ಎಣ್ಣೆ ಪಾರ್ಟಿ ಫುಲ್ ಜೋರು; ಅಧಿಕಾರಿಗಳೇ ಎಲ್ಲಿದ್ದೀರಾ!?

ಕಲಬುರ್ಗಿ:- ನಾನಾ ರೀತಿಯ ಅಪರಾಧ ಚಟುವಟಿಕೆ ಮಾಡಿದವರನ್ನು ಜೈಲಿಗೆ ಹಾಕೋದು ಯಾಕೆ. ಶಿಕ್ಷೆ ಅನುಭವಿಸಿ. ನಂತರ ಒಳ್ಳೆಯರಾಗಿ ಬದುಕಲಿ ಅಂತ.
ಆದ್ರೆ ಇಲ್ಲಿನ ಕೈದಿಗಳು ನಾವು ಜೈಲಲ್ಲೇ ಜೀವನಪೂರ್ತಿ ಕಳಿತೀವಿ ಅಂತ ಹೇಳಲು ಹೊಂಟಿದ್ದಾರೆ. ಅಷ್ಟು ಬಿಂದಾಸ್ ಲೈಫ್ ಜೈಲಲ್ಲಿ ಸಿಗುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಕೈಯಲ್ಲಿ ಸಿಗರೇಟ್ ಹಿಡಿದಿರುವ ಚಿತ್ರ ತುಂಬಾ ವೈರಲ್ ಆಗಿತ್ತು. ಇದೀಗ ಕಲಬುರಗಿ ಕೇಂದ್ರ ಕಾರಗೃಹದಲ್ಲಿ ಖೈದಿಗಳು ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದೇನು ಸೆರೆಮನೆನಾ ಅಥವಾ ಅರಮನೆನಾ ಎನ್ನುವ ಅನುಮಾನ ಮೂಡಿಸುತ್ತದೆ.
ಹೌದು, ಇದು ಕಲಬುರಗಿ ಕೇಂದ್ರ ಕಾರಾಗ್ರಹದಲ್ಲಿನ ಚಿತ್ರಗಳು... ಈ ಖೈದಿಗಳಿಗೆ ಹೊರಗಿನಿಂದ ಸಿಗರೇಟು, ಬೀಡಿ, ತಂಬಾಕು, ಗುಟಕಾ ಎಲ್ಲವೂ ಸಪ್ಲೈ ಆಗುತ್ತದೆ ಎನ್ನುವುದಕ್ಕೆ ಈ ಫೋಟೋನೇ ಸಾಕ್ಷಿ
ಸೆಂಟ್ರಲ್ ಜೈಲಿನಲ್ಲಿದ್ದರೂ ಕೂಡ, ಹೊರಗಿನವರ ಜೊತೆ ಮಾತನಾಡಲು ಇಲ್ಲಿಯ ಖೈದಿಗಳಿಗೆ ಮೊಬೈಲ್ ಫೋನ್ಗಳಿವೆ. ನೋಡಿ,ಇವರೆಲ್ಲಾ ಇಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ ಅಂತ ಅನಿಸತ್ತಾ ನಿಮಗೆ? ನೋ ವೇ ಚಾನ್ಸೇ ಇಲ್ಲ.... ಸೆಂಟ್ರಲ್ ಜೈಲ್ನ ಖೈದಿಗಳು ಬಿಂದಾಸ್ ಆಗಿದ್ದಾರೆ.
ಇವರೆಲ್ಲಾ ಕೈದಿಗಳು ಅಂತ ನಿಮಗೆ ಯಾವ ಆ್ಯಂಗಲ್ನಲ್ಲಿ ಕಾಣುತ್ತಾರೆ? ಇರೋದು ಸೆರೆಮನೆಯಲ್ಲಿ ಆದರೆ ಅರಮನೆಯಲ್ಲಿರುವ ಫೀಲ್ ಮಾಡ್ತಿದಾರೆ. ಯಾಕಂದ್ರೆ ಇವರಿಗೆಲ್ಲ ಜೈಲಿನಲ್ಲೇ ಎಲ್ಲಾ ಸೌಲಭ್ಯಗಳು ಸಿಗುತ್ತಿವೆಯಲ್ಲಾ...
ಸೆಂಟ್ರಲ್ ಜೈಲಿನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವ ಖೈದಿಗಳು... ಜೈಲಿನಲ್ಲಿ ಖೈದಿಗಳು ಕುಳಿತು ಸರಾಯಿ ಕುಡಿಯುವ, ಸಿಗರೆಟ್ ಸೇದುವ ಹಾಗೂ ಮೊಬೈಲ್ ಹಿಡಿದುಕೊಂಡಿದ್ದಾರೆ. ಸೆಂಟ್ರಲ್ ಜೈಲ್ ಈ ಖೈದಿಗಳಿಗೆ ರೆಸಾರ್ಟ್ ಫೀಲ್ ಕೊಡ್ತಿದೆ ಅನಿಸತ್ತೆ, ಚೀಯರ್ಸ್ ಹೇಳತಾ ಆರಾಮಾಗಿ ಎಣ್ಣೆ ಹೊಡೆಯುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






