ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷ 2 ಮದುವೆ ಆಗಲೇಬೇಕು! ಯಾಕೆ ಗೊತ್ತಾ..?

ನವೆಂಬರ್ 10, 2024 - 18:18
 0  14
ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷ 2 ಮದುವೆ ಆಗಲೇಬೇಕು! ಯಾಕೆ ಗೊತ್ತಾ..?

ಪ್ರತಿಯೊಬ್ಬರ ಜೀವನದಲ್ಲಿ ವಿವಾಹವು ಬಹಳ ಮುಖ್ಯವಾದ ಕ್ಷಣವಾಗಿದೆ. ಸಾಯುವವರೆಗೂ ನೆನಪಿಡುವ ಸಿಹಿ ನೆನಪು ಇದಾಗಿದೆ. ವಿವಾಹವಾದ ದಿನದಿಂದ ಜೀವನದಲ್ಲಿ ಹೊಸ ಪಯಣ ಶುರುವಾಗುತ್ತದೆ. ಅದಕ್ಕಾಗಿಯೇ ಮದುವೆ ಸಮಾರಂಭವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಆದರೆ ಮದುವೆಯ ಸಂಪ್ರದಾಯಗಳು ರಾಜ್ಯ ಮತ್ತು ಸಾಮಾಜಿಕ ವರ್ಗವನ್ನು ಅವಲಂಬಿಸಿ ಬದಲಾಗುತ್ತವೆ. ಇದಲ್ಲದೆ, ಮದುವೆಯ ಕಾನೂನುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಪ್ರಾಚೀನ ಕಾಲದಲ್ಲಿ ಬಹುಪತ್ನಿತ್ವವಿತ್ತು. ಪುರುಷ ಎಷ್ಟು ಹೆಂಡತಿಯರನ್ನು ಬೇಕಾದರೂ ಹೊಂದಬಹುದೆಂಬ ಪದ್ಧತಿ ಇತ್ತು.

ಆದರೆ ಕಾಲಾನಂತರದಲ್ಲಿ ಸಂಪ್ರದಾಯ ಕಣ್ಮರೆಯಾಯಿತು. ಈಗ ಅನೇಕ ಸ್ಥಳಗಳಲ್ಲಿ ಏಕ ಪತ್ನಿತ್ವವನ್ನು ಅನುಸರಿಸುತ್ತಾರೆ. ಎರಡನೇ ಮದುವೆಯಾದರೆ ಮೊದಲ ಪತ್ನಿಗೆ ಕಡ್ಡಾಯವಾಗಿ ವಿಚ್ಛೇದನ ನೀಡಬೇಕು. ಆದರೆ ಕೆಲವು ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡುವ ಸಂಪ್ರದಾಯವಿದೆ.

ಹೌದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪ್ರತಿಯೊಬ್ಬ ಪುರುಷನು ಎರಡು ಮದುವೆಯಾಗುತ್ತಾನೆ.ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಬ್ಬರು ಮಹಿಳೆಯರನ್ನು ಮದುವೆಯಾಗುವ ಹಕ್ಕಿದೆ. ಇದಲ್ಲದೇ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ.

 ಈ ಸಂಪ್ರದಾಯವು ವಿಚಿತ್ರವೆನಿಸಬಹುದು, ಆದರೆ ಇಲ್ಲಿನ ಸ್ಥಳೀಯ ಜನರು ಇದನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ವಾಸ್ತವವಾಗಿ, ರಾಮದೇವ್ ಕಿ ಬಸ್ತಿ ಎಂಬುದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಒಂದು ಹಳ್ಳಿಯ ಹೆಸರು, ಇಲ್ಲಿ ಅನೇಕ ತಲೆಮಾರುಗಳಿಂದ ಎರಡು ಮದುವೆಯ ಸಂಪ್ರದಾಯ ನಡೆಯುತ್ತಿದೆ. ಇಲ್ಲಿನ ಜನರು ತಮ್ಮ ಸಂಪ್ರದಾಯಗಳನ್ನು ಬಹಳ ಹೆಮ್ಮೆಯಿಂದ ಅನುಸರಿಸುತ್ತಾರೆ. ಆದ್ದರಿಂದಲೇ ಗಂಡನ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ.

 ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಾಮದೇವರ ಬಸ್ತಿ ಗ್ರಾಮದ ಜನರು ಯಾವುದೇ ಪುರುಷನ ಮೊದಲ ಹೆಂಡತಿ ಎಂದಿಗೂ ಗರ್ಭಧರಿಸಲು ಸಾಧ್ಯವಿಲ್ಲ ಎಂದು ನಂಬುತ್ತಾರೆ. ಹೇಗಾದರೂ ಮಾಡಿ ಗರ್ಭಧರಿಸುವಲ್ಲಿ ಯಶಸ್ವಿಯಾದರೂ ಆಕೆಗೆ ಪುತ್ರಿಯೇ ಹೊರತು ಪುತ್ರನಾಗುವುದಿಲ್ಲ. ಇದರಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ, ಇದರಿಂದ ಅವರ ಕುಟುಂಬದಲ್ಲಿ ಮಗ ಹುಟ್ಟುತ್ತಾನೆ. ಆದಾಗ್ಯೂ, ಇಂದಿನ ಹೊಸ ಮತ್ತು ವಿದ್ಯಾವಂತ ಪೀಳಿಗೆಯು ಈ ಸಂಪ್ರದಾಯವನ್ನು ಸಂಪೂರ್ಣವಾಗಿ ಸರಿಯಾಗಿ ಪರಿಗಣಿಸುವುದಿಲ್ಲ.

 ಇದಲ್ಲದೇ, ಕಾಲಕಾಲಕ್ಕೆ ಈ ಪ್ರದೇಶದಲ್ಲಿ ಪುರುಷರ ಸಂಖ್ಯೆ ಕಡಿಮೆಯಾಗಿರುವುದು, ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಲು ಎರಡು ಮದುವೆಗಳು ನಡೆದಿರುವುದು ಈ ಸಂಪ್ರದಾಯದ ಹಿಂದಿನ ಕಾರಣಗಳಲ್ಲಿ ಒಂದು ಎಂದು ಕೆಲವರು ವಾದಿಸುತ್ತಾರೆ. ಈ ಸಂಪ್ರದಾಯವು ಪುರುಷರಲ್ಲಿ ಸಾಮಾನ್ಯವಾಗಿದ್ದರೂ, ಇಲ್ಲಿನ ಮಹಿಳೆಯರೂ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಮಹಿಳೆಯರು ತಮ್ಮ ಪತಿ ಹಾಗೂ ಅವರ ಎರಡನೇ ಪತ್ನಿಯನ್ನು ಕುಟುಂಬದ ಭಾಗವಾಗಿ ಪರಿಗಣಿಸುತ್ತಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow