ಗಂಡು ಮಗುವಿನ ತಂದೆಯಾದ ರೋಹಿತ್ ಶರ್ಮಾ: ಜೂನಿಯರ್ ಹಿಟ್ ಮ್ಯಾನ್ ಆಗಮನಕ್ಕೆ ಫ್ಯಾನ್ಸ್ ಖುಷ್!

ನವೆಂಬರ್ 17, 2024 - 10:27
 0  11
ಗಂಡು ಮಗುವಿನ ತಂದೆಯಾದ ರೋಹಿತ್ ಶರ್ಮಾ: ಜೂನಿಯರ್ ಹಿಟ್ ಮ್ಯಾನ್ ಆಗಮನಕ್ಕೆ ಫ್ಯಾನ್ಸ್ ಖುಷ್!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, ಹಾಗೂ ನಾಯಕ ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇ ತಮ್ಮ ಕುಟುಂಬಕ್ಕೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಶುಕ್ರವಾರ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿಗೆ ತಂದೆಯಾಗುವ ಉದ್ದೇಶದಿಂದಲೇ ರೋಹಿತ್ ಶರ್ಮಾ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಗೆ ವಿಮಾನವೇರಿಲ್ಲ. ಮುಂಬೈನಲ್ಲಿದ್ದುಕೊಂಡೇ ರೋಹಿತ್ ಶರ್ಮಾ, ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದರು. ಇದೀಗ ಮಗು ಜನಿಸಿರುವ ಹಿನ್ನೆಲೆ, ಸರಣಿಗೆ ಹೋಗುವ ಸಾಧ್ಯತೆ ಇದೆ. 

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ​ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಮಗನ ಜನನದ ನಂತರ, ರೋಹಿತ್ ಶರ್ಮಾ ಈಗ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರೋಹಿತ್ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದಿದ್ದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ವದೇಶದಲ್ಲೇ ಟೀಂ ಇಂಡಿಯಾ ವೈಟ್‌ವಾಶ್ ಅನುಭವಿಸಿತು. WTC ಫೈನಲ್‌ಗೆ ಅರ್ಹತೆ ಪಡೆಯಲು ಮೆನ್ ಇನ್ ಬ್ಲೂ ಆಸ್ಟ್ರೇಲಿಯಾದಲ್ಲಿ ನಾಲ್ಕು ಅಥವಾ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. 

 ಇನ್ನೂ ಕ್ರಿಕೆಟಿಗ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow