ಡಿಪ್ಲೊಮಾ ಪಾಸಾಗಿದ್ರೆ ಟೊಯೋಟಾದಲ್ಲಿದೆ ಬಂಪರ್ ಉದ್ಯೋಗ! ಇಂದೇ ಅರ್ಜಿ ಸಲ್ಲಿಸಿ

ಕೆಲಸ ಇಲ್ಲದೇ ಮನೆಯಲ್ಲೇ ಖಾಲಿ ಕೂತಿದ್ದೀರಾ!? ಡಿಪ್ಲೋಮಾ ಮಾಡಿನೂ ನಿರುದ್ಯೋಗಿಗಳಾಗಿದ್ದೀರಾ!? ಹಾಗಿದ್ರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ.
ಡಿಪ್ಲೊಮಾ ಪೂರ್ಣಗೊಳಿಸಿಸಿರುವ ವಿದ್ಯಾರ್ಥಿಗಳಿಗೆ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯ ಬೆಂಗಳೂರು ಶಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ಎಲ್ಲ ಪಾಲಿಟೆಕ್ನಿಕ್ ಸಂಸ್ಥೆಗಳ ಪ್ಲೇಸ್‌ಮೆಂಟ್ ಅಧಿಕಾರಿಗಳು ತಮ್ಮ ಕಾಲೇಜಿನಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ಕೊಟ್ಟಿದ್ದಾರೆ.
ಯೂನೆರ್ಸ್ ಟೆಕ್ನಾಲಜೀಸ್ ಕನ್ಸಲ್ಟಿಂಗ್ ಪ್ರೈ. ಲಿ. ಸಂಸ್ಥೆಯು ಟೊಯೊಟಾ ಕಿರ್ಲೋಸ್ಕರ್‌ನಲ್ಲಿ ಉದ್ಯೋಗ ಕಲ್ಪಿಸುತ್ತಿದೆ. ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳ ಹೆಸರು, ವಿಳಾಸ, ದೂರವಾಣಿ ជ ជ缘 prakashsjp@gmail.com, pavithra@uftech.com, gayathri@uftech.com (ಇ ಮೇಲ್) ಮೂಲಕ ಕಳುಹಿಸಿಕೊಡುವಂತೆ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಆಟೋಮೊಬೈಲ್, ಮೆಕಟ್ರಾನಿಕ್ಸ್, ಟೂಲ್ ಆ್ಯಂಡ್ ಡೈ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






