ದರ್ಶನ್‌ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ! ಅಭಿಮಾನಿಗಳಿಗೆ ಕೊಟ್ಟ ಸಂದೇಶವೇನು..?

ಆಗಸ್ಟ್ 17, 2025 - 12:04
 0  17
ದರ್ಶನ್‌ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ! ಅಭಿಮಾನಿಗಳಿಗೆ ಕೊಟ್ಟ ಸಂದೇಶವೇನು..?

ನಟ ದರ್ಶನ್‌ ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿ ಮೂರು ದಿನಗಳು ಕಳೆದಿವೆ. ಸುಪ್ರೀಂ ಕೋರ್ಟ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ಜೈಲಿನಲ್ಲಿ ವಿಶೇಷ ಸೌಲಭ್ಯಗಳಿಲ್ಲದೆ ಕೈದಿಗಳಂತೆ ಸಾಮಾನ್ಯ ಮೆನು ಪ್ರಕಾರವೇ ಆಹಾರ ಸೇವಿಸುತ್ತಿದ್ದಾರೆ. ಕೈದಿಗಳೊಂದಿಗೆ ಬೆರೆಯಲು ಅವಕಾಶವಿಲ್ಲದ ಕಾರಣ ದಿನದ ಹೆಚ್ಚಿನ ಸಮಯವನ್ನು ನಾಲ್ಕು ಗೋಡೆಗಳ ಮಧ್ಯೆಯೇ ಕಳೆಯುತ್ತಿದ್ದಾರೆ.

ಇದೀಗ, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳಿಗೆ ಭರವಸೆ ತುಂಬುವ ಕೆಲಸವನ್ನು ಕೈಗೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್‌ ಅಭಿನಯದ ಡೆವಿಲ್ ಚಿತ್ರ ಪ್ರಚಾರ ಕುರಿತಾಗಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ವಿಜಯಲಕ್ಷ್ಮಿ ಬರೆದಿದ್ದು ಹೀಗಿದೆ:

“ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತಮ್ಮ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ಹಿಂತಿರುಗುವವರೆಗೆ, ಅವರ ಪರವಾಗಿ ನಾನು ಸೋಷಿಯಲ್‌ ಮೀಡಿಯಾವನ್ನು ನಿರ್ವಹಿಸುತ್ತೇನೆ. ಜೊತೆಗೆ ಸಿನಿಮಾ ಪ್ರಚಾರ ಹಾಗೂ ಅಪ್‌ಡೇಟ್ಸ್‌ಗಳನ್ನು ಹಂಚಿಕೊಳ್ಳುತ್ತೇನೆ. ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ಅವರಿಗೆ ಹಾಗೂ ನಮ್ಮ ಕುಟುಂಬಕ್ಕೆ ಅಪಾರ ಶಕ್ತಿ ನೀಡುತ್ತಿದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ, ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಹಿಂತಿರುಗುತ್ತಾರೆ.”

ಈ ಮೂಲಕ ದರ್ಶನ್‌ ಅಭಿಮಾನಿಗಳಿಗೆ ಭರವಸೆ ನೀಡಿದ ವಿಜಯಲಕ್ಷ್ಮಿ, ಸಿನಿಮಾದ ಪ್ರಚಾರವನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow