ದಸರಾಗೆ ಭರ್ಜರಿ ಗಿಫ್ಟ್ ಕೊಟ್ಟ Rishab Shetty: ಏಕಕಾಲಕ್ಕೆ 8 ಭಾಷೆಗಳಲ್ಲಿ ಕಾಂತಾರ ಟ್ರೈಲರ್ ರಿಲೀಸ್ !

ಸೆಪ್ಟೆಂಬರ್ 22, 2025 - 13:59
 0  26
ದಸರಾಗೆ ಭರ್ಜರಿ ಗಿಫ್ಟ್ ಕೊಟ್ಟ Rishab Shetty: ಏಕಕಾಲಕ್ಕೆ 8 ಭಾಷೆಗಳಲ್ಲಿ ಕಾಂತಾರ ಟ್ರೈಲರ್ ರಿಲೀಸ್ !

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಈ ಚಿತ್ರ ಅಕ್ಟೋಬರ್​ 2ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.. ಹಿಂದಿನ ಭಾಗದ ಭಾರೀ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ‘ಕಾಂತಾರ’ ಪ್ರೀಕ್ವೆಲ್‌ ತರಲು ನಿರ್ಧರಿಸಿದ್ದರು. ಹಲವು ಅದ್ಭುತ ಲೊಕೇಶನ್‌ಗಳಲ್ಲಿ ಶೂಟಿಂಗ್‌ ನಡೆಸಲಾಗಿದ್ದು, ಭವ್ಯವಾದ ಸೆಟ್‌ಗಳನ್ನು ಕಟ್ಟಲಾಗಿದೆ. ಟ್ರೈಲರ್‌ನಲ್ಲಿ ಅದ್ಭುತ ದೃಶ್ಯ ವೈಭವ ಹಾಗೂ ರಿಷಬ್ ಅವರ ಸ್ಟಂಟ್‌ಗಳು ಪ್ರಮುಖ ಆಕರ್ಷಣೆಯಾಗಿವೆ.

https://www.youtube.com/watch?v=TMQUFhWm8C0

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಗುಲ್ಶನ್ ದೇವಯ್ಯ (ರಾಜನ ಪಾತ್ರದಲ್ಲಿ) ಅಭಿನಯಿಸಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಬಿ. ಅಜನೀಶ್ ಲೋಕನಾಥ್ ನೀಡಿದ್ದಾರೆ.ಕಥೆಯು ದೈವ ವೇಷ ಹಾಕುವ ವ್ಯಕ್ತಿಯ (ರಿಷಬ್) ಅಕಸ್ಮಾತ್‌ ನಾಪತ್ತೆಯಿಂದ ಆರಂಭವಾಗಿ, ಕಾಡಿನ ರಕ್ತಮಯ ಇತಿಹಾಸ ಮತ್ತು ರಾಜ ಮನೆತನದ ಪೈಪೋಟಿ ಸುತ್ತ ಹೆಣೆದುಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್‌ 1ರಂದು ಪ್ರೀಮಿಯರ್‌ ಕಾಣುವ ಸಾಧ್ಯತೆ ಇದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಮೂಡಿ ಬಂದಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅದ್ದೂರಿತನಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ರಿಷಬ್ ಅವರು ಮಾಡಿದ ಸ್ಟಂಟ್​ಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಚಿತ್ರದ ಟ್ರೇಲರ್ ನೋಡಿದ ಬಳಿಕ ಸಿನಿಮಾದ ಮೈಲೇಜ್ ಹೆಚ್ಚಿದೆ. ಈ ಚಿತ್ರದಲ್ಲಿಯೂ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮೊದಲಾದವರು ನಟಿಸಿದ್ದಾರೆ. ಕನ್ನಡದವರೇ ಆದ ಗುಲ್ಶನ್ ದೇವಯ್ಯ ರಾಜನ ಪಾತ್ರದಲ್ಲಿದ್ದಾರೆ.

ಸದ್ಯ ಕಾಂತಾರ ಚಾಪ್ಟರ್​ 1 ಸಿನಿಮಾದ ಟ್ರೈಲರ್​ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕಾಂತಾರ ಪ್ರೀಕ್ವೆಲ್ ಮೂವಿ ಟ್ರೈಲರ್​ನಿಂದ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಇದೇ ಅಕ್ಟೋಬರ್​ 2ರಂದು ಕಾಂತಾರ ಚಾಪ್ಟರ್​ 1 ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow