ನಂದಿನಿ ಉತ್ಪನ್ನ ಬಳಕೆದಾರರಿಗೆ ಗುಡ್ ನ್ಯೂಸ್! ತುಪ್ಪ, ಬೆಣ್ಣೆ ಬೆಲೆ ಇಳಿಕೆ

ಸೆಪ್ಟೆಂಬರ್ 20, 2025 - 12:00
 0  17
ನಂದಿನಿ ಉತ್ಪನ್ನ ಬಳಕೆದಾರರಿಗೆ ಗುಡ್ ನ್ಯೂಸ್! ತುಪ್ಪ, ಬೆಣ್ಣೆ ಬೆಲೆ ಇಳಿಕೆ

ಬೆಂಗಳೂರು: ಕೆಎಂಎಫ್ ಗ್ರಾಹಕರಿಗೆ ಸಿಹಿ ಸುದ್ದಿ. ಜಿಎಸ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ನಂದಿನಿಯ ಕೆಲವು ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆಯಾಗಲಿದೆ. ಹಿಂದಿನಂತೆ ಬೆಣ್ಣೆ, ತುಪ್ಪ, ಚೀಸ್ ಮೇಲೆ 12% ಜಿಎಸ್ಟಿ ವಿಧಿಸಲಾಗುತ್ತಿತ್ತು. ಈಗ ಇದನ್ನು 5%ಕ್ಕೆ ಇಳಿಸಲಾಗಿರುವುದರಿಂದ ಬೆಲೆ ಕಡಿಮೆಯಾಗಲಿದೆ.

ಅದೇ ರೀತಿ ಪನ್ನೀರ್ ಹಾಗೂ ಯುಎಚ್ಟಿ ಹಾಲು (ಗುಡ್ ಲೈಫ್) ಮೇಲೆ ಮೊದಲು 5% ಜಿಎಸ್ಟಿ ಇತ್ತು. ಇದೀಗ ಇದನ್ನು ಶೂನ್ಯಗೊಳಿಸಿರುವುದರಿಂದ ಉತ್ಪನ್ನಗಳು ಇನ್ನಷ್ಟು ಸಸ್ತಿಯಾಗುತ್ತವೆ.

ಆದರೆ ಹಾಲು ಹಾಗೂ ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್ಟಿ ಇಲ್ಲದೇ ಇದ್ದು, ಮೊಸರಿನ ಮೇಲೆ ಹಳೆಯಂತೆ 5% ತೆರಿಗೆ ಮುಂದುವರಿಯಲಿದೆ. ಈಗಾಗಲೇ ದರ ಪರಿಷ್ಕರಣೆ ಸಂಬಂಧ ಕೆಎಂಎಫ್ ಕಾರ್ಯಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow