ನಟ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಇಟ್ಟಿರುವ ನಿಕ್ʼನೇಮ್ ಏನು ಗೊತ್ತಾ..?

ಎಪ್ರಿಲ್ 13, 2025 - 20:00
 0  7
ನಟ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಇಟ್ಟಿರುವ ನಿಕ್ʼನೇಮ್ ಏನು ಗೊತ್ತಾ..?

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಗುಟ್ಟಾಗಿ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಇದರ ನಡಯುವೆ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾ ರೂಮರ್ಸ್ಗೆ ಪುಷ್ಠಿ ನೀಡ್ತಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡಗೆ ಒಂದು ನಿಕ್ನೇಮ್ ಕೊಟ್ಟಿದ್ದಾರೆ. ಅದುವೇ ವಿಜು. ಹೌದು, ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ಅವರು ಪ್ರೀತಿಯಿಂದ ವಿಜು ಎಂದು ಕರೆಯುತ್ತಾರಂತೆ. ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಈ ವಿಚಾರ ರಿವೀಲ್ ಮಾಡಿದ್ದಕ್ಕೆ ಅನೇಕರಿಗೆ ಖುಷಿ ಆಗಿದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತೆರೆಮೇಲೆ ಮತ್ತೆ ಒಂದಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಸೂಕ್ತವಾದ ಸ್ಕ್ರಿಪ್ಟ್ ಸಿಕ್ಕಿಲ್ಲ. ಹೀಗಾಗಿ, ಇವರು ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಇವರ ಕಡೆಯಿಂದ ಈ ವಿಚಾರದಲ್ಲಿ ಗುಡ್ ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ‘ಗೀತ ಗೊಂವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರಶ್ಮಿಕಾ ಹಾಗೂ ವಿಜಯ್ ಜೋಡಿ ಸಾಕಷ್ಟು ಗಮನ ಸೆಳೆಯಿತು. ಈ ಜೋಡಿಯನ್ನು ಜನರು ಹೆಚ್ಚು ಇಷ್ಟಪಡೋಕೆ ಆರಂಭಿಸಿದರು. ಆ ಬಳಿಕ ಬಂದ ‘ಡಿಯರ್ ಕಾಮ್ರೇಡ್’ ಚಿತ್ರವು ಅಷ್ಟಾಗಿ ಸದ್ದು ಮಾಡಿಲ್ಲ. ಈಗ ವಿಜಯ್ ಹಾಗೂ ರಶ್ಮಿಕಾ ಮಧ್ಯೆ ಆಪ್ತತೆ ಬೆಳೆದಿದೆ. ಇದು ಬಹುತೇಕರಿಗೆ ಗೊತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow