ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಜಸ್ಟ್ ಡಿಗ್ರಿ ಆದ್ರೆ ಸಾಕು ಇಲ್ಲಿದೆ ಪಕ್ಕಾ ಕೆಲಸ, ಕೂಡಲೇ ಅಪ್ಲೈ ಮಾಡಿ!

ಸೆಪ್ಟೆಂಬರ್ 20, 2024 - 08:00
 0  17
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಜಸ್ಟ್ ಡಿಗ್ರಿ ಆದ್ರೆ ಸಾಕು ಇಲ್ಲಿದೆ ಪಕ್ಕಾ ಕೆಲಸ, ಕೂಡಲೇ ಅಪ್ಲೈ ಮಾಡಿ!

ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ವುಮೆನ್​ ರಿಸೋರ್ಸ್ ವಿಭಾಗ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಿದೆ.

ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್​ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ, ಅರ್ಹರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. 

ಕರ್ನಾಟಕದಲ್ಲಿ ಒಟ್ಟು 600 ಉದ್ಯೋಗಗಳಿದ್ದು ಅದರಲ್ಲಿ ಬೆಂಗಳೂರು ಅರ್ಬನ್​ನಲ್ಲಿ 92 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆ ತಿಳಿಸಿದೆ. 

ಸಂಸ್ಥೆ ಹೆಸರು- ಕೆನರಾ ಬ್ಯಾಂಕ್
ಪೋಸ್ಟ್ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು- 3,000
ವೆಬ್​ಸೈಟ್- @canarabank.com

ವಯೋಮಿತಿ ಸಡಿಲಿಕೆ:

ಎಸ್​ಎಸಿ, ಎಸ್​ಟಿಗೆ 5 ವರ್ಷಗಳು ಸಡಿಲಿಕೆ
ಒಬಿಸಿ, ಜನರಲ್ 3 ವರ್ಷಗಳು ಇರುತ್ತದೆ
ವಿಶೇಷ ಚೇತನಿಗೆ 10 ವರ್ಷಗಳು ಸಡಿಲಿಕೆ

ವಿದ್ಯಾರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಸೆಕೆಂಡ್ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ
ಟೆಸ್ಟ್ ನಡೆಸಲಾಗುತ್ತದೆ
ದಾಖಲೆ ಪರಿಶೀಲನೆ
ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್​ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow