ನಿರ್ಮಾಣಗೊಂಡ ಆಲಿಯಾ-ರಣ್ಬೀರ್ʼರ 250 ಕೋಟಿ ಮೌಲ್ಯದ ಮನೆ..! ಹೇಗಿದೆ ಗೊತ್ತಾ..?

ಆಗಸ್ಟ್ 28, 2025 - 20:08
 0  10
ನಿರ್ಮಾಣಗೊಂಡ ಆಲಿಯಾ-ರಣ್ಬೀರ್ʼರ 250 ಕೋಟಿ ಮೌಲ್ಯದ ಮನೆ..! ಹೇಗಿದೆ ಗೊತ್ತಾ..?

ಬಾಲಿವುಡ್ ಸ್ಟಾರ್ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೊಸದಾಗಿ 250 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಮನೆಯನ್ನು ನಿರ್ಮಿಸಿದ್ದಾರೆ.

ಮುಂಬೈನ ಬಾಂದ್ರಾದ ಪಾಲಿ ಹಿಲ್ಸ್ ಪ್ರದೇಶದಲ್ಲಿರುವ ಮನೆ, ರಣ್ಬೀರ್ ಕಪೂರ್ ಅವರ ತಾತನ ಕೃಷ್ಣರಾಜ್ ಬಂಗ್ಲೆಯ ಜಾಗದಲ್ಲೇ ನಿರ್ಮಾಣಗೊಂಡಿದ್ದು, ಅವರ ಪುತ್ರಿ ರಾಹಾ ಹೆಸರಿನಲ್ಲಿ ನೊಂದಾಯಿಸಲಾಗಿದೆ ಎಂಬುದು ವಿಶೇಷ.

ಮನೆಯೊಳಗೆ ಜಿಮ್, ಸ್ವಿಮ್ಮಿಂಗ್ ಪೂಲ್, ಮಕ್ಕಳ ಆಟದ ಕೋಣೆ, ಗೇಮ್ ಜೋನ್, ಖಾಸಗಿ ಚಿತ್ರಮಂದಿರ, ಕಚೇರಿ, ಬಾರ್, ದೊಡ್ಡ ಗ್ಯಾರೇಜ್ ಮತ್ತು ಲೈಬ್ರರಿ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇದಲ್ಲದೆ, ಕಾರುಗಳನ್ನು ಮೇಲ್ಮಹಡಿಗೆ ಹೊತ್ತೊಯ್ಯುವ ಲಿಫ್ಟ್ ವ್ಯವಸ್ಥೆ ಕೂಡ ಅಳವಡಿಸಲಾಗಿದೆ.

ರಣ್ಬೀರ್ಆಲಿಯಾ ದಂಪತಿ ವಿಶ್ವದ ಅತ್ಯುತ್ತಮ ವಸ್ತುಗಳನ್ನು ಬಳಸಿ ಮನೆಯನ್ನು ನಿರ್ಮಿಸಿದ್ದು, ಸುಸಜ್ಜಿತ ಫರ್ನಿಚರ್, ಅಲಂಕಾರಿಕ ದೀಪಗಳು ಮತ್ತು ಭದ್ರತಾ ವ್ಯವಸ್ಥೆಗಳು ಮನೆಯನ್ನು ಇನ್ನಷ್ಟು ವಿಶೇಷಗೊಳಿಸುತ್ತವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow