ಪವಿತ್ರಾ ಗೌಡಗೆ ಮೆಸೆಜ್ ಬಂದಾಗ ಮಾತ್ರ ಕೋಪ ಬರುತ್ತೆ: ದರ್ಶನ್ ಅಭಿಮಾನಿಗಳ ವಿರುದ್ಧ ಮತ್ತೆ ರಮ್ಯಾ ಕಿಡಿ!

ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂಥ ಸ್ತ್ರೀದ್ವೇಷಿ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ’ ಎಂದು ರಮ್ಯಾ ಹೇಳಿದ್ದರು. ತಮ್ಮ ವಕೀಲರ ಜೊತೆ ಚರ್ಚಿಸಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಂತರ ಮಾತನಾಡಿದ ಅವರು, ನನ್ನ ಪೋಸ್ಟ್ಗೆ ಕೀಳಾಗಿ ಮೆಸೆಜ್ ಮಾಡಿದ್ದರು. ಇದರಿಂದ ನನಗೆ ಬಹಳ ಬೇಜಾರಾಯ್ತು. ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೋರಾಡುತ್ತಿದ್ದೇನೆ. ಚಿತ್ರರಂಗದಲ್ಲಿ ನನಗೆ ತುಂಬಾ ಸಪೋರ್ಟ್ ಸಿಕ್ಕಿದೆ. ಚಿತ್ರರಂಗದವರು ಬಹಳ ಮೆಸೇಜ್ ಮಾಡಿದ್ದಾರೆ.
ಆದರೆ ಇದೆಲ್ಲ ಈಗಿನ ಯುವಕರ ಮೇಲೆ ಪರಿಣಾಮ ಬೀಳಲಿದೆ. ಪವಿತ್ರಾ ಗೌಡಗೆ ಮೆಸೆಜ್ ಬಂದಾಗ ಮಾತ್ರ ಕೋಪ ಬಂತು! . ಫ್ಯಾನ್ಸ್ಗೆ ಇದು ತಪ್ಪಾ ಅಂತ ಹೇಳಬೇಕು ಅಲ್ವಾ? ದರ್ಶನ್ ತಪ್ಪು ಮಾಡ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನೇ ಮರ್ಡರ್ ಮಾಡಿದ್ದರೆ ಚೆನ್ನಾಗಿತ್ತು ಎಂದು ಕಮೆಂಟ್ ಗಳು ಬಂದಿವೆ.
ರೇಣುಕಾ ಸ್ವಾಮಿ ಮಾಡಿದ್ದು ತಪ್ಪು ಅಂತಾರೆ, ಇವರು? ದರ್ಶನ್ ಜೊತೆ ನಾನು ಕ್ಲೋಸ್ ಇಲ್ಲ. ಇಷ್ಟು ಕೆಟ್ಟ ಪದಗಳನ್ನು ನಾನು ಕೇಳಿಲ್ಲ. ಈ ಹೋರಾಟ ನನ್ನೊಬ್ಬಳಿಗೆ ಮಾತ್ರ ಅಲ್ಲ. ಕೆಲವರು ಸೈಲೆಂಟ್ ಇದ್ದರೆ ಬೆಸ್ಟ್ ಅನ್ನೋ ಮಟ್ಟಕ್ಕೆ ಇದ್ದಾರೆ. ಯಾರೂ ಸಪೋರ್ಟ್ ಮಾಡದೇ ಇದ್ದರೂ ಪರವಾಗಿಲ್ಲ. ಒಬ್ಬಳೇ ಹೋರಾಡುವೆ ಎಂದಿದ್ದಾರೆ. ಹೆಣ್ಣುಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ನಿಂದಿಸುವವರ ವಿರುದ್ಧ ರಮ್ಯಾ ಅವರು ಕಾನೂನಿನ ಸಮರ ಸಾರಿದ್ದಾರೆ. ಅಶ್ಲೀಲ ಕಮೆಂಟ್ಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೂಡ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






