ಬಾದಾಮಿ ತಿನ್ನುವಾಗ ಸಿಪ್ಪೆ ತೆಗೆಯಬೇಕಾ ಅಥವಾ ಹಾಗೆಯೇ ತಿನ್ನಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಅಕ್ಟೋಬರ್ 14, 2025 - 07:01
 0  15
ಬಾದಾಮಿ ತಿನ್ನುವಾಗ ಸಿಪ್ಪೆ ತೆಗೆಯಬೇಕಾ ಅಥವಾ ಹಾಗೆಯೇ ತಿನ್ನಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಬಾದಾಮಿ ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಒಣಹಣ್ಣು. ಇದರಲ್ಲಿ ಪ್ರೋಟೀನ್, ವಿಟಮಿನ್ E, ಮೆಗ್ನೀಶಿಯಂ, ನಾರು  ಹಾಗೂ ಅನೇಕ ಪೋಷಕಾಂಶಗಳಿವೆ. ಹೃದಯದ ಆರೋಗ್ಯ ಚರ್ಮದ ಕಂಗೊಳಿಗೆವರೆಗೆ ಬಾದಾಮಿಯು ಹಲವು ರೀತಿ ಪ್ರಯೋಜನ ನೀಡುತ್ತದೆ.

ಬಹುತೇಕ ಜನರು ಬಾದಾಮಿಯನ್ನು ನೀರಿನಲ್ಲಿ ನೆನೆಸಿದ ನಂತರ ಸಿಪ್ಪೆ ತೆಗೆದು ತಿನ್ನುವ ಅಭ್ಯಾಸದಲ್ಲಿದ್ದಾರೆ. ಆದರೆ, ಬಾದಾಮಿನ ಸಿಪ್ಪೆ ಸಹಿತ ಸೇವನೆ ಮಾಡುವುದು ಇನ್ನೂ ಹೆಚ್ಚು ಲಾಭದಾಯಕ ಎಂಬುದು ತಜ್ಞರ ಅಭಿಪ್ರಾಯ.

ಸಿಪ್ಪೆಯ ಲಾಭಗಳು:

ನಾರು: ಬಾದಾಮಿ ಸಿಪ್ಪೆಗಳು ನಾರದ ಸಮೃದ್ಧ ಮೂಲವಾಗಿದ್ದು, ಮಲಬದ್ಧತೆ ನಿವಾರಣೆ, ಜೀರ್ಣಕ್ರಿಯೆ ಸುಗಮವಾಗಿಸುವಲ್ಲಿ ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲು: ಬಾದಾಮಿನ ಸಿಪ್ಪೆಗಳಲ್ಲಿ ವಿಟಮಿನ್ E ಸೇರಿ ವಿವಿಧ ಪೋಷಕಾಂಶಗಳಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸಲು ಹಾಗೂ ಕೂದಲನ್ನು ಬಲಪಡಿಸಲು ಸಹಾಯಕ.

ನೈಸರ್ಗಿಕ ಸ್ಕ್ರಬ್: ಬಾದಾಮಿ ಸಿಪ್ಪೆಗಳನ್ನು ಸ್ಕ್ರಬ್ ಅಥವಾ ಫೇಸ್ ಪ್ಯಾಕ್ ರೂಪದಲ್ಲಿ ಕೂಡ ಬಳಸಬಹುದು. ಇದರಿಂದ ಚರ್ಮ ಸ್ವಚ್ಛ ಮತ್ತು ನಿಭಾಯವಾಗಿರುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow