ಬ್ರಾಂಡ್ ಬೆಂಗಳೂರು ಯೋಜನೆಗೆ ಸಿಎಂ ಸಿದ್ದರಾಮಯ್ಯ ಅನುದಾನ ಘೋಷಣೆ..!

ಮಾರ್ಚ್ 7, 2025 - 10:50
 0  10
ಬ್ರಾಂಡ್ ಬೆಂಗಳೂರು ಯೋಜನೆಗೆ ಸಿಎಂ ಸಿದ್ದರಾಮಯ್ಯ ಅನುದಾನ ಘೋಷಣೆ..!

ಬೆಂಗಳೂರಿನ ಅನುದಾನ ಏಳು ಸಾವಿರ ಕೋಟಿಗೆ ಏರಿಕೆ ಆಗಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆ ಘೋಷಣೆಯಾಗಿದೆ. ಬೆಂಗಳೂರು ಟನೆಲ್ ಯೋಜನೆಗೆ 40 ಸಾವಿರ ಕೋಟಿ, ಬೆಂಗಳೂರಿನಲ್ಲಿ ಸ್ಪೆಷಲ್ ಪರ್ಪಸ್ ಪಾರ್ಕಿಂಗ್ ವ್ಯವಸ್ಥೆ ಯೋಜನೆಯೂ ಘೋಷಣೆಯಾಗಿದೆ. ಬ್ರಾಂಡ್ ಬೆಂಗಳೂರಿಗೆ 1800 ಕೋಟಿ ರೂಪಾಯಿ ವೆಚ್ಚದಲ್ಲಿ 21 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಹವಾಮಾನ ವೈಪರೀತ್ಯಗಳನ್ನು ನಿಯಂತ್ರಿಸಲು ಹಾಗೂ ಒಳಚರಂಡಿ ಮತ್ತು ಎಸ್‌ಟಿಪಿ ಸೌಲಭ್ಯಗಳನ್ನು ಸುಧಾರಿಸಲು 3000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಕಾವೇರಿ ನದಿಯಿಂದ ನೀರು ಪೂರೈಸುವ 5ನೇ ಹಂತದ ಯೋಜನೆಗೆ 555 ಕೋಟಿ ರೂಪಾಯಿಗಳನ್ನು ಬಳಸಲಾಗುವುದು,

ಇದರಿಂದ 110 ಹಳ್ಳಿಗಳಿಗೆ ಕುಡಿಯುವ ನೀರು ದೊರೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಮೆಟ್ರೋ ಜಾಲವನ್ನು 98.60 ಕಿ.ಮೀ.ಗೆ ವಿಸ್ತರಿಸಲಾಗುವುದು, ಇದರಲ್ಲಿ ದೇವನಹಳ್ಳಿಗೆ ಸಂಪರ್ಕವೂ ಸೇರಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow