ಮತ್ತೆ ಪಾಕ್ನಿಂದ ಡ್ರೋನ್ ದಾಳಿ: ಡ್ರೋನ್’ಗಳನ್ನ ಆಗಸದಲ್ಲೇ ಪುಡಿಗಟ್ಟಿದ ಭಾರತ

ಮೇ 10, 2025 - 08:53
 0  9
ಮತ್ತೆ ಪಾಕ್ನಿಂದ ಡ್ರೋನ್ ದಾಳಿ: ಡ್ರೋನ್’ಗಳನ್ನ ಆಗಸದಲ್ಲೇ ಪುಡಿಗಟ್ಟಿದ ಭಾರತ

ನವದೆಹಲಿ: ಭಾರತೀಯ ಸೇನಾಪಡೆಗಳ ಪ್ರತಿ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಆಂತರಿಕ ಬಿಕ್ಕಟ್ಟಿನಿಂದಲೂ ಇಕ್ಕಟ್ಟಿಗೆ ಸಿಲುಕಿದೆ. ಆಪರೇಷನ್ ಸಿಂದೂರ್ ನಂತರ ಭಾರತವು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ್ದರೆ, ಪಾಕಿಸ್ತಾನದೊಳಗಿನ ಬಲೂಚಿಸ್ತಾನದಲ್ಲಿರುವ ಬಂಡುಕೋರ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನಿ ಸೇನೆಯ ನೆಲೆಗಳ ಮೇಲೆ ಪ್ರಮುಖ ದಾಳಿ ನಡೆಸಿದೆ. ಅಲ್ಲದೆ, ಆಯಕಟ್ಟಿನ ಮಹತ್ವದ ಗ್ಯಾಸ್ ಪೈಪ್‌ಲೈನ್ ಅನ್ನು ಸಹ ಸ್ಫೋಟಿಸಿದೆ.

ಪಾಕ್ ದಾಳಿ ನಡೆಸುತ್ತಿದ್ದಂತೆಯೇ ಜಮ್ಮು -ಕಾಶ್ಮೀರದಲ್ಲಿ ಸೈರನ್ ಮೊಳಗಿದೆ. ಕೂಡಲೇ ಅಲರ್ಟ್​ ಆದ ಭಾರತೀಯ ಸೇನೆ ಪಾಕ್​ನ ಡ್ರೋನ್​​ಗಳನ್ನು ಆಗಸದಲ್ಲೇ ಹೊಡೆದುರುಳಿಸಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನು ಪಾಕಿಸ್ತಾನದ ನಡೆಸಿದ ಡ್ರೋನ್​ಗಳಿಗೆ ಭಾರತ ವಾಯು ಸೇನೆ ಆಕಾಶದಲ್ಲಿ ಹೊಡೆದು ಹಾಕಿರುವ ಶಬ್ಧ ಭಯಾನಕವಾಗಿದೆ.

ಸಂಪೂರ್ಣ ಕತ್ತಲು ಆವರಿಸಿದ್ದರಿಂದ ಏನು ಕಾಣುತ್ತಿಲ್ಲ. ಕೇವಲ ಡಮ್​ ಡಮಾರ್​ ಎನ್ನುವ ಭಾರಿ ಶಬ್ಧವೊಮದೇ ಕೇಳಿಸುತ್ತಿದೆ. ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲೂ ಡ್ರೋನ್ ದಾಳಿಗೆ ಯತ್ನಿಸಿದೆ. ಅವಂತಿಪೋರಾದ ಏರ್‌ಬೇಸ್‌ ಗುರಿಯಾಗಿಸಿ ಹಾರಿಸಿದ್ದ ಡ್ರೋನ್ ಅನ್ನು ಧ್ವಂಸ ಮಾಡಲಾಗಿದೆ. ಹೀಗೆ ರಾಜಸ್ಥಾನ, ಪಂಜಾಬ್​ ಸೇರಿದಂತೆ ಗಡಿ ರಾಜ್ಯಗಳಲ್ಲಿ ಪಾಕ್​ ಡ್ರೋನ್​ ದಾಳಿಯನ್ನು ಭಾರತ ಸೇನೆ ವಿಫಲಗೊಳಿಸಿದೆ.

ಭಾರತ ಸೇನಾ ಪಡೆ ಆಕಾಶದಲ್ಲಿ ಪಾಕಿಸ್ತಾನದ ಡ್ರೋನ್​ಗಳನ್ನು ಪುಡಿಗಟ್ಟಿದೆ. ಇನ್ನು ಪಾಕಿಸ್ತಾನದ ನಿರಂತರ ದಾಳಿಯಿಂದಾಗಿ ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ. ಜಮ್ಮು ಸಿಟಿ ಸಂಪೂರ್ಣ ಕತ್ತಲಮಯವಾಗಿದ್ದು, ಡ್ರೋನ್​​​ಗಳನ್ನು ಹೊಡೆಯುತ್ತಿರುವ ಭಯಾನ ಶಬ್ಧಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow