ಮೆಟ್ರೋ ಪ್ರಯಾಣ ದುಬಾರಿ.. ಬಿಎಂಟಿಸಿಯತ್ತ ಜನ ಮುಖ: BMRCL ಗೆ ಬಿಗ್ ಶಾಕ್ ನೀಡಿದ ಪ್ರಯಾಣಿಕರು

ಫೆಬ್ರವರಿ 28, 2025 - 22:17
 0  15
ಮೆಟ್ರೋ ಪ್ರಯಾಣ ದುಬಾರಿ.. ಬಿಎಂಟಿಸಿಯತ್ತ ಜನ ಮುಖ: BMRCL ಗೆ ಬಿಗ್ ಶಾಕ್ ನೀಡಿದ ಪ್ರಯಾಣಿಕರು

ಬೆಂಗಳೂರು: ನಮ್ಮ ಮೆಟ್ರೋದ ಪ್ರಯಾಣ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿಗರು ಮೆಟ್ರೋ ಬಿಟ್ಟು ಬಿಎಂಟಿಸಿ ಕಡೆ ಮುಖ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆ ಕಾಡುತ್ತಿದೆ. ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ತಿಳಿದುಬಂದಿದೆ.

ಹೌದು ಫೆಬ್ರವರಿ 9ರಂದು ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿತ್ತು. ಜನಸಾಮಾನ್ಯರು ಈ ಸಂಬಂಧ ಶೇಕಡಾ ನೂರರಷ್ಟು ಏರಿಕೆ ಮಾಡಲಾಗಿದೆ ಇದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದರು.

ನಂತರದ ದಿನದಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ತೀರ್ಮಾನ ಕೈಗೊಂಡಿದ್ದ ಬಿಎಂಆರ್ ಟಿಸಿಎಲ್ ಅಲ್ಪ ಪ್ರಮಾಣದಲ್ಲಿ ಅಂದರೆ ಶೇಕಡಾ ನೂರರಷ್ಟು ಬೆಲ ಏರಿಕೆಯನ್ನು ಕಡಿಮೆ ಮಾಡಿತ್ತು. ಆದರೂ ಕೂಡ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ ಮುಂದುವರೆದಿದ್ದು, ಬೆಲೆ ಏರಿಕೆಯಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.

ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಐಪಿಎಲ್ ಪಂದ್ಯ ವೀಕ್ಷಣೆ ಸಂದರ್ಭದಲ್ಲೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಹುತೇಕ ಜನರು ಮೆಟ್ರೋ ಮೂಲಕವೇ ಬಂದಿದ್ದರು. ಆದರೆ ಈ ಹಿಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾ ಶಿವರಾತ್ರಿದಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ 5.20 ಲಕ್ಷಕ್ಕಿಳಿದಿದೆ. ದರ ಏರಿಕೆಗಿಂತ ಮೊದಲು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರ ಓಡಾಟವಿತ್ತು. ದರ ಏರಿಸಿದ ಬಳಿಕ ಪ್ರತಿದಿನ ಸರಾಸರಿ 1.20 ಲಕ್ಷದಷ್ಟು ಕಡಿಮೆಯಾಗಿತ್ತು. ಮಂಗಳವಾರದಂದು 7.82 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

ಪ್ರತಿ ಭಾನುವಾರ ಮತ್ತು ರಜಾ ದಿನಗಳಲ್ಲಿ 7 ಲಕ್ಷದ ಆಸುಪಾಸಿನಲ್ಲಿ ಪ್ರಯಾಣಿಕರ ಸಂಖ್ಯೆ ಇರ್ತಿತ್ತು. ದರ ಏರಿಕೆಯ ಬಳಿಕ ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ 7.74 ಲಕ್ಷದಷ್ಟು ಇರುತ್ತಿತ್ತು. ಆದ್ರೆ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow