ಮೈಸೂರಿನಲ್ಲಿ ಅದ್ದೂರಿ ನಡೆದ ಡಾಲಿ ಮದುವೆ: ಮೀನಾ ಲಗ್ನದಲ್ಲಿ ಧನ್ಯತಾಗೆ ಮಾಂಗಲ್ಯಧಾರಣೆ ಮಾಡಿದ ಧನಂಜಯ್!

ಡಾಲಿ ಧನಂಜಯ್ ಹಾಗೂ ಧನ್ಯತಾ ವಿವಾಹ ಬಲು ಅದ್ಧೂರಿಯಾಗಿ ಮೈಸೂರು ನಗರಿಯಲ್ಲಿ ನಡೆದಿದೆ. ಮೈಸೂರು ಅರಮನೆ ಮುಂಭಾಗದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಹಾಗೂ ಧನ್ಯತಾ ವಿವಾಹ ಕಾರ್ಯ ಜರುಗಿದೆ. ಡಾಲಿ ಧನಂಜಯ್ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದ್ದು, ಅವರ ಜೊತೆಗೆ ಚಿತ್ರರಂಗದ ಗಣ್ಯರು, ರಾಜ್ಯದ ಪ್ರಮುಖ ರಾಜಕಾರಣಿಗಳು ಸಹ ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ.
ನಟ ಡಾಲಿ ಡಾಕ್ಟರ್ ಧನ್ಯತಾ ಕೊರಳಿಗೆ ಮಾಂಗಲ್ಯ ಕಟ್ಟಿದ್ದು, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಆಪ್ತ ಸ್ನೇಹಿತರ ಮಧ್ಯೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಧನ್ಯತಾ ಅವರ ಕೊರಳಿಗೆ ತಾಳಿ ಕೊಟ್ಟಿದ್ದಾರೆ. ಈ ಜೋಡಿ ವಧೂ ವರರ ದಿರಿಸಿನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಇದರಲ್ಲಿ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಎಲ್ಲರೂ ಭಾಗಿಯಾಗಿದ್ದರು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮೈಸೂರಿನಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿ ರಿಸೆಪ್ಷನ್ ನಡೆದಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸ್ಯಾಂಡಲ್ವುಡ್ನ ಕಲಾವಿದರ ದಂಡೇ ರಿಸೆಪ್ಷನ್ಗೆ ಹರಿದು ಬಂದಿತ್ತು
ಮೈಸೂರಿನ ಅರಮನೆ ಮುಂದಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಆರತಕ್ಷತೆ ನಡೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






