ರಾಜ್ಯ ಚಲನಚಿತ್ರ ಪ್ರಶಸ್ತಿ 2020: ಅಕ್ಷತಾ ಪಾಂಡವಪುರ, ಪ್ರಜ್ವಲ್ ದೇವರಾಜ್ ಗೆ ಒಲಿದ ಅತ್ಯುತ್ತಮ ನಟಿ-ನಟ!

ರಾಜ್ಯ ಚಲನಚಿತ್ರ ಪ್ರಶಸ್ತಿ 2020 ಪ್ರಕಟವಾಗಿದ್ದು, ಅಕ್ಷತಾ ಪಾಂಡವಪುರ, ಪ್ರಜ್ವಲ್ ದೇವರಾಜ್ ಗೆ ಅತ್ಯುತ್ತಮ ನಟಿ-ನಟ ಪ್ರಶಸ್ತಿ ಲಭಿಸಿದೆ.
ಕನ್ನಡ ಚಿತ್ರರಂಗ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಕನ್ನಡ ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬರುತ್ತಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಬಾಕಿ ಉಳಿದ ಎಲ್ಲಾ ವರ್ಷಗಳ ಪ್ರಶಸ್ತಿಗಳನ್ನು ಸರ್ಕಾರ ಘೋಷಣೆ ಮಾಡುತ್ತಿದೆ.
ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ!
ಅತ್ಯುತ್ತಮ ನಟ – ಪ್ರಜ್ವಲ್ ದೇವರಾಜ್
ಸಿನಿಮಾ – ಜೇಂಟಲ್ ಮ್ಯಾನ್
ಅತ್ಯುತ್ತಮ ನಟಿ – ಅಕ್ಷತಾ ಪಾಂಡವಪುರ
ಸಿನಿಮಾ – ಪಿಂಕಿ ಎಲ್ಲಿ
ಅತ್ಯುತ್ತಮ ಪೋಷಕ ನಟ – ರಮೇಶ್ ಪಂಡಿತ್
ಸಿನಿಮಾ – ತಲೆದಂಡ
ಅತ್ಯುತ್ತಮ ಪೋಷಕ ನಟಿ – ಮಂಜುಳಮ್ಮ
ಸಿನಿಮಾ – ದಂತ ಪುರಾಣ
ಮೊದಲನೆ ಅತ್ಯುತ್ತಮ ಚಿತ್ರ – ಪಿಂಕಿ ಎಲ್ಲಿ
ಎರಡನೇ ಅತ್ಯುತ್ತಮ ಚಿತ್ರ – ವರ್ಣಪಟಲ
ಮೂರನೇ ಅತ್ಯುತ್ತಮ ಚಿತ್ರ – ಹರಿವ ನದಿಗೆ ಮೈಯೆಲ್ಲ ಕಾಲು
ಅತ್ಯುತ್ತಮ ಮಕ್ಕಳ ಸಿನಿಮಾ – ಪದಕ
ಅತ್ಯುತ್ತಮ ಸಂಗೀತ ನಿರ್ದೇಶಕ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
* ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್(ತಲೆದಂಡ)
* ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)
* ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
* ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
*ಅತ್ಯುತ್ತಮ ಬಾಲ ನಟ: ಅಹಿಲ್ ಅನ್ಸಾರಿ (ದಂತ ಪುರಾಣ)
*ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಶಿ ಪೂಜಾರ (ಪಾರು)
*ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ (ಬಿಚ್ಚುಗತ್ತಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್ (ಮರಣೋತ್ತರ ಪ್ರಶಸ್ತಿ)
ನಿಮ್ಮ ಪ್ರತಿಕ್ರಿಯೆ ಏನು?






