ಸಿನಿಮಾ ಶೈಲಿಯಲ್ಲಿ ಕಾರುಗಳನ್ನು ಬಾಡಿಗೆ ಪಡೆದು ವಂಚನೆ: 46 ಕಾರು ವಶಕ್ಕೆ ಪಡೆದ ಖಾಕಿ, ಆರೋಪಿ ಎಸ್ಕೇಪ್
ಬಳ್ಳಾರಿ:- ಸಿನಿಮಾ ಮಾದರಿಯಲ್ಲಿ ಕಾರುಗಳನ್ನು ಬಾಡಿಗೆ ಪಡೆದು ವಂಚನೆ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಆರೋಪಿಯಿಂದ 46 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಜಾಹೀದ್ ಅಲಿಯಾಸ್ ಸೋನು ವಂಚನೆ ಮಾಡಿದ್ದು ಈಗ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿದ್ದ ಹೇಳಿ ಜಾಹಿದ್ ಕಾರುಗಳನ್ನು ಬಾಡಿಗೆ ಪಡೆದು ಹಲವೆಡೆ ಮಾರಾಟ ಮಾಡಿದ್ದ. ಆ ಬಳಿಕ ಬ್ರಾಂಡೆಡ್ ಕಾರುಗಳನ್ನು 4-10 ಲಕ್ಷದವರೆಗೂ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ.
ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಟ್ಟು ನಂತರ ಜಾಹೀದ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು.
ತನಿಖೆಗೆ ಇಳಿದಾಗ ಜಹೀದ್ 107 ಕಾರುಗಳ ಮಾಲೀಕರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ತನಿಖೆ ಚುರುಕುಗೊಳಿಸಿ ಕಾರುಗಳನ್ನು ಪತ್ತೆ ಮಾಡಿರುವ ಪೊಲೀಸರು ಮಾಲೀಕರಿಗೆ ಕಾರುಗಳನ್ನು ಹಿಂತಿರುಗಿಸಿದ್ದಾರೆ. ಆರೋಪಿ ಜಹೀದ್ 700ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆ ಪಡೆದು ಮಾರಾಟ ಮಾಡಿರುವ ಶಂಕೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?