ಹೊಸ ಸ್ಮಾರ್ಟ್ TV ಖರೀದಿ ಮಾಡೋ ಪ್ಲ್ಯಾನ್ ನಲ್ಲಿದ್ದೀರಾ!? ಮೊದಲು ಇದನ್ನು ತಿಳಿಯಿರಿ!

ಜನವರಿ 31, 2025 - 07:00
 0  12
ಹೊಸ ಸ್ಮಾರ್ಟ್ TV ಖರೀದಿ ಮಾಡೋ ಪ್ಲ್ಯಾನ್ ನಲ್ಲಿದ್ದೀರಾ!? ಮೊದಲು ಇದನ್ನು ತಿಳಿಯಿರಿ!

ನೀವು ಕೂಡ ಸ್ಮಾರ್ಟ್ TV ಖರೀದಿ ಮಾಡೋ ಪ್ಲ್ಯಾನ್ ನಲ್ಲಿದ್ದೀರಾ!? ಹಾಗಿದ್ರೆ ಮೊದಲು ಇದನ್ನು ನೀವು ತಿಳಿಯಲೇಬೇಕು. ಹೌದು, ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಬಜೆಟ್‌ನಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ. ಟೆಕ್ ಕ್ಷೇತ್ರ ಕೂಡ ಭಾರೀ ನಿರೀಕ್ಷೆಯಲ್ಲಿದೆ.

ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ ಆಗ್ರಹ ಮಾಡಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಜನರಿಗೆ ಸರ್ಕಾರ ಸ್ವಲ್ಪ ರಿಲೀಫ್ ನೀಡಬಹುದು.
ಮೊಬೈಲ್ ಫೋನ್ ಕಂಪನಿಗಳು ಆಮದು ಸುಂಕ ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಆಮದು ಸುಂಕ ಕಮ್ಮಿ ಇದ್ದರೆ ಜನರಿಗೆ ಕಡಿಮೆ ಬೆಲೆಗೆ ಫೋನ್​ಗಳು ಸಿಗುತ್ತವೆ. 

ಮೊಬೈಲ್ ಹೊರತುಪಡಿಸಿ ಇತರ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಜೆಟ್ ನಂತರ ಕಡಿಮೆ ಆಗಬಹುದು. ಫೋನ್ ಕಂಪನಿಗಳಂತೆ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​ಕೂಡ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಎಲೆಕ್ಟ್ರಾನಿಕ್ ವಸ್ತುಗಳ ಘಟಕಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಿವೆ. ಒಂದು ವೇಳೆ ಸರ್ಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆ ಆಗಲಿದೆ.

ಹೀಗಾಗಿ ಖರೀದಿ ಮಾಡೋಕೂ ಮುನ್ನ ಸ್ವಲ್ಪ ಕಾಯಿರಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow