22 ದಿನದ ಮಗುವಿಗೆ 65 ಕಡೆ ಬರೆ ಎಳೆದ ಪೋಷಕರು..! ಕಂದಮ್ಮನ ಸ್ಥಿತಿ ಗಂಭೀರ

ಮಾರ್ಚ್ 1, 2025 - 22:03
 0  18
22 ದಿನದ ಮಗುವಿಗೆ 65 ಕಡೆ ಬರೆ ಎಳೆದ ಪೋಷಕರು..! ಕಂದಮ್ಮನ ಸ್ಥಿತಿ ಗಂಭೀರ

ಮಹಾರಾಷ್ಟ್ರ: ಸಾಂಪ್ರದಾಯಿಕ ಚಿಕಿತ್ಸೆ' ಹೆಸರಿನಲ್ಲಿ 22 ದಿನಗಳ ಶಿಶುವಿಗೆ 65 ಬಾರಿ ಬಿಸಿ ಕುಡುಗೋಲಿನಿಂದ ಬರೆ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ 22 ದಿನಗಳ ಶಿಶುವಿಗೆ 65 ಕಡೆ ಬರೆ ಹಾಕಲಾಗಿದೆ.

ಈ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಮಗುವಿನ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಅಂತಿಮವಾಗಿ ಗಂಭೀರ ಸ್ಥಿತಿಯಲ್ಲಿ ಅಮರಾವತಿಯ ಡಫರಿನ್ ಆಸ್ಪತ್ರೆಗೆ ದಾಖಲಿಸಲಾಯಿತು.

ಫುಲ್ವಂತಿ ರಾಜು ಅಧಿಕಾರ್ ಎಂಬ ಶಿಶು ಅನಾರೋಗ್ಯಕ್ಕೆ ಒಳಗಾಗಿತ್ತು, ಸಂಬಂದಿಕರು ಬಂದವರು ಮಗುವಿಗೆ ಬರೆ ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ. ಮಗುವಿನ ಹೊಟ್ಟೆಗೆ 65 ಬಾರಿ ಬರೆ ಹಾಕಿದ್ದಾರೆ. ಮಗುವಿನ ಪೋಷಕರಾದ ರಾಜು ಅಧಿಕಾರ್ ಮತ್ತು ಅವರ ಪತ್ನಿ ಕೂಡ ಈ ಭಯಾನಕ ಘಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ಕೃತ್ಯವು ಮಗುವಿನ ಅನಾರೋಗ್ಯವನ್ನು ಗುಣಪಡಿಸುತ್ತದೆ ಎಂದು ಸಂಬಂಧಿಕರು ನಂಬಿದ್ದರು, ಇದು ಆ ಪ್ರದೇಶದಲ್ಲಿ ಇನ್ನೂ ಅಪಾಯಕಾರಿ ಮತ್ತು ಅವೈಜ್ಞಾನಿಕ ಪದ್ಧತಿ ನಡೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow