Actress Nishita: ಲಕ್ಷ್ಮಿ ನಿವಾಸ ಸೀರಿಯಲ್ ಖ್ಯಾತಿಯ ನಟಿ ನಿಶಾಗೆ ಕಿರುಕುಳ ಆರೋಪ..!

ಆಗಸ್ಟ್ 29, 2025 - 20:01
 0  23
Actress Nishita: ಲಕ್ಷ್ಮಿ ನಿವಾಸ ಸೀರಿಯಲ್ ಖ್ಯಾತಿಯ ನಟಿ ನಿಶಾಗೆ ಕಿರುಕುಳ ಆರೋಪ..!

ಕನ್ನಡದ ಅನೇಕ ಕಲಾವಿದರು ಬೇರೆ ಭಾಷೆಯ ಧಾರಾವಾಹಿಗಳಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಕನ್ನಡದ ಬಾಲ ನಟಿ ನಿಶಿತಾ (Nishitha)ಗೆ ತೆಲುಗಿನ ಲಕ್ಷ್ಮಿ ನಿವಾಸಂ ಧಾರಾವಾಹಿ ತಂಡದಿಂದ ವಂಚನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ನಿಶಿತಾಳ ತಾಯಿ ಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ವಿಡಿಯೋ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡದ ಲಕ್ಷ್ಮಿ ನಿವಾಸ ಸೀರಿಯಲ್​​ನಲ್ಲೂ ಬಾಲಕಿ ನಿಶಿತಾ ನಟಿಸಿದ್ದಾಳೆ. ತೆಲುಗಿನಲಕ್ಷ್ಮಿ ನಿವಾಸಧಾರಾವಾಹಿಯಲ್ಲಿ ಆಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ಎಷ್ಟೇ ತಡವಾದರೂ, ಕಷ್ಟವಾದರೂ ನಟನೆ ಮುಂದುವರಿಸಿದ್ದ ನಿಶಾತಾಳನ್ನು ಈಗ ಸೀರಿಯಲ್​​​ನಿಂದ ತೆಗೆದು ಹಾಕಲಾಗಿದೆ. ಆಕೆಯ ಬದಲಿಗೆ ಬೇರೆ ಬಾಲ ನಟಿಗೆ ಅವಕಾಶ ನೀಡಲಾಗಿದೆ.

ನಿಶಿತಾ ನಟನೆ ಮಾಡುವಾಗ ಕರೆಂಟ್ ಶಾಕ್ ತಗುಲಿತ್ತು. ಸ್ವಿಮ್ಮಿಂಗ್ ಪೂಲ್​​ನಲ್ಲಿ ಕೂಡ ಶೂಟ್ ಮಾಡಿಸಿದ್ದರು. ತಡರಾತ್ರಿ ಶೂಟಿಂಗ್ ಮಾಡಿಸಿ, ನಿದ್ದೆ ಬರುತ್ತಿದೆ ಎಂದರೂ ನಿಶಿತಾಳನ್ನು ಬಿಟ್ಟಿರಲಿಲ್ಲ. ಹುಶಾರಿಲ್ಲದೇ ಇದ್ದಾಗಲೂ ಚಿತ್ರೀಕರಣ ಮಾಡಿಸಿದ್ದರು. ಮಧ್ಯ ರಾತ್ರಿ ಕ್ಯಾಬ್ ನೀಡಿರಲಿಲ್ಲ. ಹೀಗೆ ಹಲವು ಆರೋಪಗಳನ್ನು ನಿಶಿತಾ ಅವರ ತಾಯಿ ಪ್ರಿಯಾ ಮಾಡಿದ್ದಾರೆ.

ಲಕ್ಷ್ಮಿ ನಿವಾಸಂಧಾರಾವಾಹಿ ನಿರ್ಮಾಪಕಿ ಪ್ರಶಾಂತಿ ಮೇಲೆ ಪ್ರಿಯಾ ಅವರು ಆರೋಪ ಹೊರಿಸಿದ್ದಾರೆ. ನಿಶಿತಾಳಿಂದ ಇಷ್ಟೆಲ್ಲ ಕೆಲಸ ಮಾಡಿಸಿಕೊಂಡು, ಬಳಿಕ ಯಾವುದೇ ಮಾಹಿತಿ ನೀಡದೇ ಆಕೆಯ ಬದಲಿಗೆ ಬೇರೆ ಬಾಲನಟಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಪ್ರಿಯಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಏಪ್ರಿಲ್ ತಿಂಗಳಿಂದ ನಿಶಿತಾಗೆ ಸಂಭಾವನೆ ಕೂಡ ನೀಡಿಲ್ಲ ಎಂದು ಪ್ರಿಯಾ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow