Bigg Boss ಸೀಸನ್ 11ಕ್ಕೆ ಕೌಂಟ್ ಡೌನ್ ಶುರು: ಮೊದಲು ಮನೆಯ ಗೃಹಪ್ರವೇಶ ಮಾಡೋರು ಇವರೇನಾ!?

ಸೆಪ್ಟೆಂಬರ್ 28, 2024 - 19:32
 0  8
Bigg Boss ಸೀಸನ್ 11ಕ್ಕೆ ಕೌಂಟ್ ಡೌನ್ ಶುರು: ಮೊದಲು ಮನೆಯ ಗೃಹಪ್ರವೇಶ ಮಾಡೋರು ಇವರೇನಾ!?

ಕನ್ನಡದ ಬಿಗ್​ ರಿಯಾಲಿಟಿ ಶೋ​ ಬಿಗ್​ಬಾಸ್​ ಸೀಸನ್​ 11ರ ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆಯಾಗ್ತಿದೆ. ಪ್ರತಿ ಸೀಸನ್​ ಸ್ಪರ್ಧಿಗಳು ಯಾರು ಇರ್ತಾರೆ ಅನ್ನೋದರ ಮೇಲೆ ವೀಕ್ಷಕರ ಚಿತ್ತ ಇರ್ತಿತ್ತು. ಬಟ್ ಈ ಬಾರಿ ಕೌತುಕ ಹೆಚ್ಚಿಸಿರೋದು ಬಿಗ್​ ಬಾಸ್​ ಕಾನ್ಸೆಪ್ಟ್​. ಈ ಬಾರಿಯ ಸೀಸನ್​ 11ರಲ್ಲಿ ಸ್ವರ್ಗ-ನರಕ ಎಂಬ ಎರಡು ಕಾನ್ಸೆಪ್ಟ್​ ಇರಲಿದೆ.

ಇಷ್ಟು ದಿನ ಯಾವಾಗಪ್ಪಾ ಬಿಗ್​ಬಾಸ್​ ಬರುತ್ತೆ ಅಂತ ಕಾಯುತ್ತಿದ್ದ ವೀಕ್ಷಕರು ಇನ್ನೂ ಒಂದೇ ಒಂದು ದಿನದಲ್ಲಿ ಈ ಶೋ ಅಧಿಕೃತವಾಗಿ ಶುರುವಾಗಲಿದೆ. ಸೆಪ್ಟೆಂಬರ್ 29ರಂದು ಒಟ್ಟು 5 ಸ್ಪರ್ಧಿಗಳು ಬಿಗ್​ಬಾಸ್​ಗೆ ಹೋಗಲಿದ್ದಾರೆ. ವೀಕ್ಷಕರು ನೀಡುವ ವೋಟ್​ನಿಂದ ಯಾರು ಸ್ಪರ್ಗಕ್ಕೆ ಹೋಗ್ತಾರಾ? ಯಾರು ನರಕಕ್ಕೆ ಹೋಗ್ತಾರೆ ಅಂತ ಗೊತ್ತಾಗಲಿದೆ. ವಿಶೇಷ ಎಂದರೆ ರಾಜಾರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿದು ಬರಲಿದೆ.

ಇದೇ ಭಾನುವಾರ ಬಿಗ್​ಬಾಸ್​ ಅಸಲಿ ಕಥೆ ರಿವೀಲ್​ ಆಗ್ತಿದೆ. ಈ ನಡುವೆ ಬಿಗ್​ ಮನೆಗೆ ಕಾಲಿಡೋ ಆ ಸೆಲೆಬ್ರಿಟಿಗಳು ಯಾರು? ಅನ್ನೋದು ಸದ್ಯದ ಕೌತುಕ. ಇದಕ್ಕೂ ರಾಜಾರಾಣಿ ಶೋನಲ್ಲಿ ಶನಿವಾರ ಉತ್ತರ ಸಿಗಲಿದೆ. ಆದ್ರೇ ಈಗ ಎಲ್ಲರ ಚಿತ್ತ ಇರೋದು ಆ ಪ್ರೋಮೋ ಮೇಲೆ. ಹೌದು, ಹೊಸ ಪ್ರೊಮೋ ರಿಲೀಸ್​ ಆಗಿದ್ದು, ಅದರಲ್ಲಿ ಕೆಲವು ಫೋಟೋಗಳನ್ನ ತೋರಿಸಲಾಗಿದೆ.

ಆದರೆ ಆ ಫೋಟೋಗಳು ಅಷ್ಟೊಂದು ಸ್ಪಷ್ಟವಾಗಿಲ್ಲ. ಬ್ಲರ್​ ಆಗಿದ್ದು, ಯಾರು? ಯಾರು ಇರಬಹುದು ಆ ಸ್ಪರ್ಧಿಗಳು ಅಂತ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಆ ಫೋಟೋಗಳನ್ನ ಡೀಕೋಡ್ ಮಾಡೋಕೆ ಹಲವರು ಯತ್ನಿಸಿದ್ದಾರೆ. ಆ ಬ್ಲರ್​ ಫೋಟೋಗಳಲ್ಲಿ ವೀಕ್ಷಕರು ಕೆಲವೊಂದು ಸ್ಟಾರ್​ ಸೆಲೆಬ್ರಿಟಿಗಳ ಹೆಸರನ್ನು ಗೆಸ್​ ಮಾಡಿದ್ದಾರೆ.

ನಿರ್ದೇಶಕ ಎಸ್​ ನಾರಾಯಣ ಅವರ ಮಗ ನಟ ಪಂಕಜ್, ಸತ್ಯ ಸೀರಿಯಲ್​ ಖ್ಯಾತಿಯ ನಟಿ ಗೌತಮಿ ಜಾದವ್​, ವಜ್ರಕಾಯ ಸಿನಿಮಾ ಖ್ಯಾತಿಯ ನಟಿ ನಭಾ ನಟೇಶ್​​, ಕನ್ನಡತಿ ಸೀರಿಯಲ್​ ಖ್ಯಾತಿಯ ಕಿರಣ್‌ ರಾಜ್‌, ರೀಲ್ಸ್​ ಮೂಲಕ ಖ್ಯಾತಿಯ ಪಡೆದಿರೋ ಭೂಮಿಕಾ ಬಸವರಾಜ್​, ಅಂತರಪಟ ಖ್ಯಾತಿಯ ನಟಿ ತನ್ವಿ ಬಾಲರಾಜ್​ ಈ ಬಾರಿ ಬಿಗ್‌ಬಾಸ್‌ ಹೋಗ್ತಾರೆ ಅನ್ನೋ ಪೋಸ್ಟರ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow