Dhanashree Verma Yuzvendra Chahal: ಚಹಲ್ ಜೊತೆ ಡಿವೋರ್ಸ್?ಕೊನೆಗೂ ಮೌನ ಮುರಿದ ಪತ್ನಿ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ದಂಪತಿಗಳು ಶೀಘ್ರದಲ್ಲೇ ವಿಚ್ಛೇದನ ಪಡೆಯಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಅವರು ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಇದರ ಬೆನ್ನಲ್ಲೇ ಚಾಹಲ್ ಜೊತೆಗಿನ ವಿಚ್ಛೇದನ ಸುತ್ತ ಎದ್ದಿರುವ ಊಹಾಪೋಹದ ಮಾತುಗಳಿಗೆ ತಿರುಗೇಟು ನೀಡಿದ ಧನಶ್ರೀ, ಸುಳ್ಳು ನಿರೂಪಣೆಗಳ ಮೂಲಕ ತನ್ನ ಚಾರಿತ್ರ್ಯ ವಧೆ ಮಾಡಲಾಗಿದೆ ಎಂದು ಹೇಳಿದರು. ಸತ್ಯವು ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದ ಅವರು, ಯಾವುದೇ ಸಮರ್ಥನೆಯನ್ನು ನೀಡಲು ನಿರಾಕರಿಸಿದರು.
ಅವರ ಪೋಸ್ಟ್ ಹೀಗಿದೆ, ‘ಕಳೆದ ಕೆಲವು ದಿನಗಳು ನನ್ನ ಕುಟುಂಬ ಮತ್ತು ನನಗೆ ನಂಬಲಾಗದಷ್ಟು ಕಠಿಣವಾಗಿವೆ. ನಿಜವಾಗಿ ಅಸಮಾಧಾನವುಂಟುಮಾಡುವ ಸಂಗತಿಯೆಂದರೆ, ಆಧಾರರಹಿತ ಬರವಣಿಗೆ, ಸತ್ಯ-ಪರೀಕ್ಷೆಯಿಲ್ಲದಿರುವುದು ಮತ್ತು ದ್ವೇಷವನ್ನು ಹರಡುವ ಮೂಲಕ ನನ್ನ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಸಮಾಜದಲ್ಲಿ ಉತ್ತಮ ಹೆಸರು ಪಡೆಯಲು ನಾನು ವರ್ಷಗಳಿಂದ ಶ್ರಮಿಸಿದ್ದೇನೆ.
ನನ್ನ ಮೌನ ದೌರ್ಬಲ್ಯದ ಸಂಕೇತವಲ್ಲ. ನಕಾರಾತ್ಮಕತೆಯು ಆನ್ಲೈನ್ನಲ್ಲಿ ಸುಲಭವಾಗಿ ಹರಡುತ್ತದೆ, ಇತರರನ್ನು ಮೇಲಕ್ಕೆತ್ತಲು ಧೈರ್ಯ ಮತ್ತು ಸಹಾನುಭೂತಿ ಬೇಕಾಗುತ್ತದೆ. ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯಲು ನಾನು ಬಯಸುತ್ತೇನೆ. ಸಮರ್ಥನೆಯ ಅಗತ್ಯವಿಲ್ಲದೆ ಸತ್ಯವು ಎತ್ತರವಾಗಿ ನಿಲ್ಲುತ್ತದೆ. ಓಂ ನಮಃ ಶಿವಾಯ’ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






