IPL ಆರಂಭಕ್ಕೆ ಕ್ಷಣಗಣನೆ: ಮೊದಲ ಪಂದ್ಯ ಯಾವಾಗ? RCBಗೆ ಮೊದಲ ಎದುರಾಳಿ ಯಾರು?

ಮಾರ್ಚ್ 22 ರಂದು ಐಪಿಎಲ್-2025ರ ಉದ್ಘಾಟನಾ ಸಮಾರಂಭ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ನ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.
ಆರ್ಸಿಬಿ ನಾಯಕತ್ವವನ್ನು ರಜತ್ ಪಾಟಿದಾರ್ ವಹಿಸಿಕೊಂಡಿದ್ದಾರೆ. ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದಾರೆ. ಅದಕ್ಕೂ ಮುನ್ನ ಭವ್ಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಐಪಿಎಲ್-2025ರ ಉದ್ಘಾಟನಾ ಸಮಾರಂಭ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ನ ಪ್ರಸಿದ್ಧ ತಾರೆಯರು ಪ್ರದರ್ಶನ ನೀಡಲಿದ್ದಾರೆ. ಪಂದ್ಯದ ಟಿಕೆಟ್, ಉದ್ಘಾಟನಾ ಸಮಾರಂಭದ ಟಿಕೆಟ್ ಆಗಿರುತ್ತದೆ. KKR vs RCB IPL 2025 ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟಕ್ಕೆ ಲಭ್ಯವಿವೆ. ಅಭಿಮಾನಿಗಳು BookMyShowನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಬಹುದು. ಒಂದು ಟಿಕೆಟ್ನ ಕನಿಷ್ಠ ಬೆಲೆ ಪ್ರಸ್ತುತ 3,500 ರೂಪಾಯಿ ಆಗಿದೆ. ಮುಂದಿನ ದಿನಗಳ ಬೆಲೆ ಹೆಚ್ಚಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






