Kannappa Teaser 2: 'ಕಣ್ಣಪ್ಪ' ಟೀಸರ್ ರಿಲೀಸ್: ಈ ಚಿತ್ರದಲ್ಲಿದ್ದಾರೆ ಇಂಡಿಯನ್ ಸೂಪರ್ ಸ್ಟಾರ್ಸ್!

ಪೌರಾಣಿಕ ಕಥಾಹಂದರ ಇರುವ ‘ಕಣ್ಣಪ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಕಣ್ಣಪ್ಪನ ಪಾತ್ರವನ್ನು ಟಾಲಿವುಡ್ ನಟ ವಿಷ್ಣು ಮಂಚು ಅವರು ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಘಟಾನುಘಟಿ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದೀಗ ಬಹುಭಾಷೆಗಳಲ್ಲಿ ರಿಲೀಸ್ ಆಗಿರೋ ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್ ಕಲಾವಿದರು ಮಿಂಚಿದ್ದಾರೆ. ಅದರಲ್ಲಿ ಪ್ರಭಾಸ್ ಕಣ್ಣೇ ಹೈಲೈಟ್ ಆಗಿದೆ. ಪ್ರಭಾಸ್ ಲುಕ್‌ಗೆ ಫ್ಯಾನ್ಸ್ ಕಳೆದೋಗಿದ್ದಾರೆ.
https://www.youtube.com/watch?v=wKBP9dFxFBc&ab_channel=T-SeriesTelugu
ನಾಯಕನಾಗಿ ಮಂಚು ವಿಷ್ಣು, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಜೊತೆ ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಆಗುತ್ತಿದೆ. ಪ್ರಭಾಸ್ ನೋಡೋ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನ ಎಂಟ್ರಿ ಚಿಂದಿ ಎಂದಿದ್ದಾರೆ. 150 ಕೋಟಿ ರೂ. ಬಜೆಟ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಮಾಡಲಾಗಿದೆ. ಟೀಸರ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






