MS Dhoni IPL 2025: ಪಂದ್ಯ ಸೋಲುತ್ತಿದ್ದಂತೆ ಧೋನಿಗೆ ಬೈದ ಲೇಡಿ CSK ಫ್ಯಾನ್!

ಎಪ್ರಿಲ್ 1, 2025 - 09:09
 0  16
MS Dhoni IPL 2025: ಪಂದ್ಯ ಸೋಲುತ್ತಿದ್ದಂತೆ ಧೋನಿಗೆ ಬೈದ ಲೇಡಿ CSK ಫ್ಯಾನ್!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ MS ಧೋನಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಲೇಡಿ ಅಭಿಮಾನಿ ಓರ್ವರು MS ಧೋನಿಗೆ ಬೈದಿರುವ ವಿಡಿಯೋ ವೈರಲ್ ಆಗಿದೆ. 

ಮಾರ್ಚ್ 30 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಎಂಎಸ್ ಧೋನಿ ಔಟಾದ ವೇಳೆ ಮಹಿಳೆಯೊಬ್ಬರು ನೀಡಿದ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದ ಸಮಯದಲ್ಲಿ, 15.5 ಓವರ್‌ನಲ್ಲಿ ವನಿಂದು ಹಸರಂಗ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಔಟ್ ಆದ ನಂತರ ಎಂಎಸ್ ಧೋನಿ 7 ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದರು. ಎಂಎಸ್​ಡಿ ಕಣಕ್ಕೆ ಉಳಿದ ಕಾರಣ ಪ್ರೇಕ್ಷಕರು ಸಾಕಷ್ಟು ಉತ್ಸುಕರಾಗಿದ್ದರು, ಆದರೆ ಇದೆಲ್ಲ ವ್ಯರ್ಥವಾಯಿತು.

ಕೊನೆಯ ಓವರ್‌ನಲ್ಲಿ ಚೆನ್ನೈ ತಂಡಕ್ಕೆ 20 ರನ್‌ಗಳು ಬೇಕಾಗಿದ್ದವು ಮತ್ತು ಧೋನಿ ಸ್ಟ್ರೈಕ್‌ನಲ್ಲಿದ್ದರು. ಧೋನಿ ಕ್ಲಾಸಿಕ್ ಫಿನಿಶಿಂಗ್ ನೀಡುತ್ತಾನೆ ಎಂದೇ ಎಲ್ಲರ ಅಂದುಕೊಂಡಿದ್ದರು. ಆದರೆ ಸಂದೀಪ್ ಶರ್ಮಾ ಅವರ ಲೋ ವೈಡ್ ಫುಲ್ ಟಾಸ್‌ನಲ್ಲಿ ಧೋನಿ ಲಾಂಗ್-ಆನ್ ಕಡೆಗೆ ದೊಡ್ಡ ಶಾಟ್ ಹೊಡೆಯಲು ಹೋದರು. ಈ ಸಂದರ್ಭ ಚೆಂಡು ಬ್ಯಾಟ್​ಗೆ ಸರಿಯಾಗಿ ಕನೆಕ್ಟ್ ಆಗದ ಪರಿಣಾಮ, ಶಿಮ್ರಾನ್ ಹೆಟ್ಮೆಯರ್ ಡೈವ್ ಮೂಲಕ ಕ್ಯಾಚ್ ಪಡೆದರು. ಧೋನಿ ಔಟಾದಾಗ ಇಡೀ ಕ್ರೀಡಾಂಗಣ ಸ್ತಬ್ಧವಾಯಿತು. ಈ ಪೈಕಿ ಸಿಎಸ್​ಕೆ ಅಭಿಮಾನಿಯೊಬ್ಬಳ ಪ್ರತಿಕ್ರಿಯೆ ಟಿವಿ ಪರದೆಯ ಮೇಲೆ ಕಾಣಿಸಿತು.

ಧೋನಿ ಔಟ್ ಆದ ತಕ್ಷಣ ಯುವ ಮಹಿಳಾ ಅಭಿಮಾನಿಯೊಬ್ಬರು ಕೋಪದಿಂದ ಕೆರಳಿದ್ದನ್ನು ಕ್ಯಾಮೆರಾ ಸೆರೆಹಿಡಿದಿದೆ. ಧೋನಿಯ ಹೊಡೆತದಿಂದ ಅವರು ಸಂತೋಷವಾಗಿಲ್ಲ. ತನ್ನ ಕೈಯನ್ನು ಚಾಚಿ ಏಯ್.. ಎಂದು ಏನೋ ಹೇಳಲು ಬಯಸಿದಳು, ಆದರೆ ನಂತರ ಕಂಟ್ರೋಲ್ ಮಾಡಿಕೊಂಡು ಮೌನವಾದಳು. ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow