Namma Metro: ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಟ್ರೈನ್ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಟ್ರ್ಯಾಕಿಗೆ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಿನ್ನೆ ರಾತ್ರಿ 10.04ರ ಸುಮಾರಿಗೆ ಹಸಿರು ಮಾರ್ಗದ ಮೆಟ್ರೋ ಲೈನ್ನ ಪ್ಲಾಟ್ಫಾರ್ಮ್ 1ರಲ್ಲಿ ನಡೆದಿದೆ. 35 ವರ್ಷದ ಈ ವ್ಯಕ್ತಿ ಟ್ರೈನ್ ಬರುವ ಸಮಯದಲ್ಲಿ ಹಳಿಗೆ ಜಿಗಿದ ಕಾರಣ ತೀವ್ರ ಗಾಯಗಳಾಗಿವೆ.ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆಟ್ರೋದಲ್ಲಿ ಕಠಿಣ ಭದ್ರತಾ ಕ್ರಮಗಳಿದ್ದರೂ ಇಂತಹ ಘಟನೆಗಳು ಹಿಂದೆಯೂ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಮತ್ತಷ್ಟು ಭದ್ರತೆ ಹೆಚ್ಚಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?