Rajath-Vinay: ಮಧ್ಯರಾತ್ರಿ ರಜತ್, ವಿನಯ್ ರಿಲೀಸ್! ಪೊಲೀಸ್ ಠಾಣೆಯಲ್ಲಿ ಆಗಿದ್ದೇನು..?

ಮಾರ್ಚ್ 25, 2025 - 10:41
 0  20
Rajath-Vinay: ಮಧ್ಯರಾತ್ರಿ ರಜತ್, ವಿನಯ್ ರಿಲೀಸ್! ಪೊಲೀಸ್ ಠಾಣೆಯಲ್ಲಿ ಆಗಿದ್ದೇನು..?

 ಬಿಗ್ ಬಾಸ್ ಕನ್ನಡರಿಯಾಲಿಟಿ ಶೋ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್  ಅವರು ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನಿಷೇಧಿತ ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡಿದ್ದಕ್ಕೆ ಅವರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿನಯ್ ಗೌಡ ಮತ್ತು ರಜತ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು.

ನಂತರ ಮಾರ್ಚ್​ 24ರ ಬೆಳಿಗ್ಗೆ ಅರೆಸ್ಟ್ ಆಗಿದ್ದ ಅವರು ಅದೇ ದಿನ ರಾತ್ರಿ ಬಿಡುಗಡೆ ಹೊಂದಿದ್ದಾರೆ. ನೋಟಿಸ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರು ಜೈಲಿನಿಂದ ರಿಲೀಸ್ ಆದರೂ ಅವರಿಗೆ ತಲೆನೋವು ಮುಗಿದಿಲ್ಲ. ಅವರು ಈಗ ಮತ್ತೆ ವಿಚಾರಣೆಗೆ ಹಾಜರಿ ಹಾಕಬೇಕಿದೆ.

ಬಿಗ್​ ಬಾಸ್ ಕಾರ್ಯಕ್ರಮದಲ್ಲಿ ರಗಡ್ ಸ್ಪರ್ಧಿಗಳಾಗಿಯೇ ಕಾಣಿಸಿಕೊಂಡಿದ್ದ ರಜತ್ ಹಾಗೂ ವಿನಯ್ ಇಬ್ಬರು ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವಂತ ರೀಲ್ಸ್​ ಮಾಡಿದ್ರು. ಇದನ್ನು ನೋಡಿದ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಿಸಿದ್ರು. ಇಬ್ಬರಿಗೂ ನೋಟಿಸ್​ ನೀಡಿದ್ರು. ನಿನ್ನೆ ಮಧ್ಯಾಹ್ನ ಇಬ್ಬರನ್ನು ಬಂಧಿಸಿ ಬಳಿಕ ರಾತ್ರೋ ರಾತ್ರಿ ರಿಲೀಸ್​ ಮಾಡಿದ್ಯಾಕೆ ಎನ್ನುವ ಪ್ರಶ್ನೆ ಮೂಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow