Rakesh Poojary: ರಾಕೇಶ್ ಪೂಜಾರಿ ಜೊತೆ ಸಾಕಷ್ಟು ಸಿನಿಮಾ ಮಾಡಲು ಪ್ಲ್ಯಾನ್ ಮಾಡಿದ್ದ ರಿಷಬ್ ಶೆಟ್ಟಿ!
ಕಾಮಿಡಿ ಕಿಲಾಡಿಗಳು ಮೂಲಕ ಜನಮನ ಗೆದಿದ್ದ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ -3 ವಿನ್ನರ್ ಆಗಿದ್ದ ಇವರು ಮೇ 12 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದ ಈ ನಟನ ನಿಧನ ಅವರ ಅಭಿಮಾನಿಗಳು ಮಾತ್ರವಲ್ಲದೇ ರಾಜ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿತ್ತು.
ರಾಕೇಶ್ ನಿಧನ ಹೊಂದಿದಾಗ ಅವರನ್ನು ನೋಡಲು ರಿಷಬ್ ತೆರಳಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ‘ನಗು ಮುಖದಲ್ಲಿ ರಾಕೇಶ್ ಅವರನ್ನು ನೋಡಿದ್ದೇನೆ. ಆ ನಗುಮುಖ ಹಾಗೆಯೇ ಇರಲಿ ಎಂಬ ಕಾರಣಕ್ಕೆ ನಾನು ಅವನನ್ನು ನೋಡಿಲ್ಲ’ ಎಂದು ರಿಷಬ್ ಈ ಮೊದಲು ಹೇಳಿದ್ದರು.
ಈಗ ಅವರು ರಾಕೇಶ್ನ ಮತ್ತೆ ನೆನಪಿಸಿಕೊಂಡಿದ್ದಾರೆ. ಜೀ ಕನ್ನಡದ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ ಅಲ್ಲಿ ರಿಷಬ್ ಮುಖ್ಯ ಅತಿಥಿ ಆಗಿದ್ದರು. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಿದರು. ಮುಂದಿನ ದಿನಗಳಲ್ಲಿ ರಾಕೇಶ್ನ ಇಟ್ಟುಕೊಂಡು, ಹಲವು ಸಿನಿಮಾ ಮಾಡುವ ಪ್ಲ್ಯಾನ್ ಅವರಲ್ಲಿ ಇತ್ತು.
‘ಮನಸ್ಸಿಗೆ ತುಂಬಾ ನೋವಾಗುವಂತಹ ಘಟನೆ ನಡೆಯಿತು. ನಿಮ್ಮದೇ (ಜೀ ಕನ್ನಡ) ಕಲಾವಿದ ರಾಕೇಶ್ ಪೂಜಾರಿ ನಿಧನ ಹೊಂದಿದರು. ಅವನು ಇದನ್ನು ನೋಡಬೇಕಿತ್ತು ಅನಿಸ್ತಿದೆ. ಆದರೆ, ಎಲ್ಲೂ ಕುಳಿತು ಇದನ್ನು ಅವನು ನೋಡ್ತಾ ಇದಾನೆ. ಅದ್ಭುತ ಕಲಾವಿದ’ ಎಂದು ಭಾವುಕರಾಗಿ ಮಾತನಾಡಿದ ರಿಷಬ್ ಶೆಟ್ಟಿ.
ನಿರ್ದೇಶಕರಾದಾಗ ಒಳ್ಳೆಯ ಕಲಾವಿದರು ಸಿಕ್ಕಿದಾಗ ಖುಷಿ ಆಗುತ್ತದೆ. ಮತ್ತೆ ಹೊಸ ಹೊಸ ಪಾತ್ರಗಳನ್ನು ಅವರಿಗೆ ಬರೆಯಬಹುದು. ನನ್ನ ಸಿನಿಮಾಗಳಲ್ಲಿ ರಿಪೀಟ್ ಕಲಾವಿದರೇ ಇರೋದು. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಎಲ್ಲರೂ ಆಸ್ತಾನ ಕಲಾವಿದರು. ರಾಕೇಶ್ ಅವರನ್ನು ಕೂಡ ನನ್ನ ಜೊತೆ ಸೇರಿಸಿಕೊಂಡು ಬಿಟ್ಟಿದ್ದೆ. ಒಂದು ಮನುಷ್ಯ ತುಂಬಾ ಒಳ್ಳೆಯವನಾಗಬಾರದು. ರಾಕೇಶ್ ತುಂಬಾ ಒಳ್ಳೆಯವನು ಎಂದು ರಿಷಬ್ ಬೇಸರ ಹೊರಹಾಕಿದರು.
ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ತುಳು ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?