Rohit Sharma: ಹಿಟ್ ಶಾಟ್ಸ್ ಮರೆತೆ ಬಿಟ್ರಾ ರೋಹಿತ್!? ಒಂದಂಕಿ ರನ್ಗೆ ಸುಸ್ತಾದ ಕ್ಯಾಪ್ಟನ್!

ಹಿಟ್ ಮ್ಯಾನ್ ರೋಹಿತ್ ಅಂದ್ರೆ ನಮಗೆ ನೆನಪಾಗೋದು 6,4 ಗಳೇ ಹೀಗಾಗಿ ಅವರ ಅಭಿಮಾನಿಗಳು ಅವರ ಬ್ಯಾಟಿಂಗ್ ಮೇಲೆ ಹೆಚ್ಚು ನಿರೀಕ್ಷೆ ಇಡುತ್ತಾರೆ.
ಆದರೆ ಅದ್ಯಾಕೋ ಏನೋ ರೋಹಿತ್ ಬ್ಯಾಟಿಂಗ್ ನಿಂದ Wao ಅನ್ನೋ ಥರ ಬ್ಯಾಟಿಂಗ್ ಬರ್ತಾನೆ ಇಲ್ಲ. ಯಾಕೋ ಮಂಕಾದ್ರಾ ರೋಹಿತ್ ಎಂಬ ಪ್ರಶ್ನೆ ಕಾಡುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಇದೀಗ ರಣಜಿ ಟೂರ್ನಿಯಲ್ಲೂ ಅದೇ ಕಥೆಯನ್ನು ಮುಂದುವರೆಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರುವ ಹಿಟ್ಮ್ಯಾನ್ ಕೇವಲ 3 ರನ್ಗಳಿಸಿ ಔಟಾಗಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ 6 ಓವರ್ಗಳ ಒಳಗೆ ಪೆವಿಲಿಯನ್ ಸೇರಿದ್ದಾರೆ.
ಔಕಿಬ್ ನಬಿ ಎಸೆತದಲ್ಲಿ ಜೈಸ್ವಾಲ್ (4) ಎಲ್ಬಿಡಬ್ಲ್ಯೂ ಆಗಿ ಹೊರನಡೆದರೆ, ಇದರ ಬೆನ್ನಲ್ಲೇ ರೋಹಿತ್ ಶರ್ಮಾ (3) ಉಮರ್ ನಝೀರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 5 ಇನಿಂಗ್ಸ್ ಆಡಿದ್ದ ಹಿಟ್ಮ್ಯಾನ್ ಕೇವಲ 31 ರನ್ಗಳು ಮಾತ್ರ ಕಲೆಹಾಕಿದ್ದರು. ಅಂದರೆ ಕೇವಲ 6.20 ಸರಾಸರಿಯಲ್ಲಿ ಮಾತ್ರ ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಇದೀಗ ಫಾರ್ಮ್ ಕಂಡುಕೊಳ್ಳಲು 10 ವರ್ಷಗಳ ಬಳಿಕ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಮೊದಲ ಇನಿಂಗ್ಸ್ನಲ್ಲಿ 3 ರನ್ಗಳಿಸಿ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಅವರು ದ್ವಿತೀಯ ಇನಿಂಗ್ಸ್ ಮೂಲಕ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






