Shubman Gill: ಸಕ್ಸಸ್ ಕಂಡ ಗಿಲ್ʼಗೆ ಬಂಪರ್ ಗಿಫ್ಟ್: ಟಿ20 ಕಮ್ ಬ್ಯಾಕ್ʼಗೆ ಮಹೂರ್ತ ಫಿಕ್ಸ್
ಏಷ್ಯಾಕಪ್ ಮುನ್ನ ಬಿಸಿಸಿಐ ವಲಯದಲ್ಲಿ ಹೊಸ ಆಟ ಶುರುವಾಗಿದೆ. ಟೆಸ್ಟ್ನಲ್ಲಿ ನಾಯಕತ್ವದಲ್ಲಿ ಹೊಳಪು ತೋರಿದ ಶುಭ್ಮನ್ ಗಿಲ್ಗೆ ಇದೀಗ ಮತ್ತೊಂದು ಭರ್ಜರಿ ಉಡುಗೊರೆ ಸಿದ್ಧವಾಗಿದೆ. 'ಪ್ರಿನ್ಸ್' ಪಟ್ಟಾಭಿಷೇಕದತ್ತ ಗಿಲ್ ಹೆಜ್ಜೆ ಇಡುತ್ತಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಈ ಯುವ ನಾಯಕನ ಸಾಮರ್ಥ್ಯ ಕುರಿತು ಪ್ರಶ್ನೆ ಎದ್ದಿತ್ತು. ಆದರೆ, ಗಿಲ್ ಅದಕ್ಕೆ ಸಮರ್ಥ ಉತ್ತರ ನೀಡಿದರು. ಸ್ವಂತ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಹಿಮ್ಮೆಟ್ಟಿಸಿ, ನಾಯಕತ್ವದಲ್ಲಿ ಯಶಸ್ಸು ಕಂಡ ಅವರು, ಈಗ ಟಿ20 ತಂಡದ ಉಪನಾಯಕನ ಪಟ್ಟಕ್ಕೆ ಬಿಸಿಸಿಐ ಕಣ್ಣು ಹಾಕಿದೆ. ಏಷ್ಯಾಕಪ್ ಮೂಲಕ ಟಿ20 ಕರಿಯರ್ಗೆ ಪುನರ್ಜನ್ಮ ದೊರೆತಿರುವ ಗಿಲ್,
ವಿಶ್ವಕಪ್ ನಂತರ ಟಿ20 ನಾಯಕನಾಗುವ ಸಾಧ್ಯತೆಗಳೂ ಜೋರಾಗಿದೆ. 2027ರ ವಿಶ್ವಕಪ್ ಗುರಿಯೊಂದಿಗೆ, ಬಿಸಿಸಿಐ ಯುವ ನಾಯಕತ್ವದ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.ಟೆಸ್ಟ್ನಿಂದ ಟಿ20ವರೆಗೆ, ಗಿಲ್ ನಾಯಕತ್ವದ ಹಾದಿ ಸ್ಪಷ್ಟವಾಗುತ್ತಿದೆ. ಈಗ, 'ಪ್ರಿನ್ಸ್' ಶುಭ್ಮನ್ ಗಿಲ್ ಟೀಮ್ ಇಂಡಿಯಾದ ಭವಿಷ್ಯದ ರಾಜನಾಗುವ ದಾರಿ ಹಿಡಿದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?