Yash-Kajal Aggarawal: ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ‘ಮಗಧೀರ’ ಬೆಡಗಿ..!

ಮೇ 18, 2025 - 20:06
ಮೇ 17, 2025 - 13:18
 0  12
Yash-Kajal Aggarawal: ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ‘ಮಗಧೀರ’ ಬೆಡಗಿ..!

ಬಹುಭಾಷಾ ನಟಿ ಕಾಜಲ್​ ಅಗರ್ವಾಲ್​​ಗೆ​ ಸಖತ್​​ ಕ್ರೇಜ್​ ಇದೆ. ಸದಾ ತೆರೆಯ ಮೇಲೆ ಹಾಟ್‌ ಆಗಿ ಕಾಣಿಸಿಕೊಳ್ಳುವ ಕಾಜಲ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ‘ರಾಮಾಯಣ’ದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾಮನ ಮುಂದೆ ರಾವಣನಾಗಿ ಯಶ್ ಘರ್ಜಿಸಲಿದ್ದಾರೆ.

ಸದ್ಯದ ಹಾಟ್ ಟಾಪಿಕ್ ಏನಪ್ಪಾ ಅಂದ್ರೆ, ರಾವಣ ಯಶ್‌ಗೆ ಮಡದಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಂಡೋದರಿ ಪಾತ್ರದಲ್ಲಿ ‘ಮಗಧೀರ’ ಬೆಡಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಮೂಲಗಳ ಪ್ರಕಾರ,

ಈಗಾಗಲೇ ಕಾಜಲ್ ಮಂಡೋದರಿ ಪಾತ್ರಕ್ಕೆ ಲುಕ್ ಟೆಸ್ಟ್ ಕೊಟ್ಟಿದ್ದು, ಚಿತ್ರೀಕರಣಕ್ಕೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡವೇ ಖಾತ್ರಿಪಡಿಸಬೇಕಿದೆ. ಅದೇನೇ ಇರಲಿ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow